ಶ್ರೀಹರಿಕೋಟ: ಜನವರಿ 12ರಂದು ಇಒಎಸ್-ಎನ್1 ಉಪಗ್ರಹ ಹೊತ್ತ ಪಿಎಸ್ಎಲ್ವಿ-ಸಿ62 ರಾಕೆಟ್ ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಇದರೊಂದಿಗೆ 2026ನೇ ಸಾಲಿನ ಮೊದಲ ಉಡ್ಡಯನಕ್ಕೆ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಸಾಕ್ಷಿಯಾಗಲಿದೆ.
.2025 ಹಿಂದಣ ಹೆಜ್ಜೆ| ಬಾಹ್ಯಾಕಾಶ: ಇಸ್ರೊಗೆ ವರ್ಷಪೂರ್ತಿ ಸಾಧನೆಯ ಫಸಲು.Bahubali Rocket: ಇಸ್ರೊ ಚಾರಿತ್ರಿಕ ಸಾಧನೆ;ಕಕ್ಷೆ ಸೇರಿದ 4.4ಟನ್ ಭಾರದ ಉಪಗ್ರಹ.
2026ರ ಮೊದಲ ಉಡಾವಣೆಗೆ ಇಸ್ರೊ ಸಜ್ಜಾಗಿದೆ. ಇಒಎಸ್-ಎನ್1, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಕಾರ್ಯತಂತ್ರದ ಭಾಗವಾದ ಇಮೇಜಿಂಗ್ ಉಪಗ್ರಹವಾಗಿದೆ.

ಜನವರಿ 12ರಂದು ಭಾರತೀಯ ಕಾಲಮಾನ ಬೆಳಿಗ್ಗೆ 10.17ಕ್ಕೆ ಶ್ರೀಹರಿಕೋಟದ ಮೊದಲ ಲಾಂಚ್ ಪ್ಯಾಡ್ನಿಂದ ಪಿಎಸ್ಎಲ್ವಿ-ಸಿ62 ನಭಕ್ಕೆ ಚಿಮ್ಮಲಿದೆ ಎಂದು ಇಸ್ರೊ ತಿಳಿಸಿದೆ.

ಈ ರಾಕೆಟ್ ಸ್ಪೇನ್ ಮೂಲದ ಸ್ಟಾರ್ಟ್ಅಪ್ ಕೆಸ್ಟ್ರೆಲ್ ಇನಿಷಿಯಲ್ ಡೆಮಾನ್ಸ್ಟ್ರೇಟರ್ (ಕೆಐಡಿ) ಅಭಿವೃದ್ಧಿಪಡಿಸಿದ ಸಣ್ಣ ಪ್ರೊಬ್ ಡಿವೈಸ್ ಅನ್ನು ಹೊತ್ತೊಯ್ಯಲಿದೆ.

ಇದರ ಜೊತೆಗೆ ಭಾರತ, ಮಾರಿಷಸ್, ಲಕ್ಸೆಂಬರ್ಗ್, ಯುಎಇ, ಸಿಂಗಾಪುರ, ಯುರೋಪ್ ಮತ್ತು ಅಮೆರಿಕ ದೇಶಗಳ ವಾಣಿಜ್ಯ ಹಾಗೂ ಸಂಶೋಧನಾ ಸಂಸ್ಥೆಗಳ 17 ಇತರೆ ಪೇಲೋಡ್ಗಳನ್ನು ಹೊಂದಿರಲಿದೆ.

ಆಸಕ್ತರು ಈ ಉಡ್ಡಯನವನ್ನು ನೇರವಾಗಿ ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.

ವೆಬ್ಸೈಟ್ ಲಿಂಕ್ ಇಲ್ಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.