ಭಾನುವಾರ, ಆಗಸ್ಟ್ 14, 2022
22 °C

ಡಿ.21ರಂದು ಸಮೀಪದಲ್ಲಿ ಗೋಚರಿಸಲಿವೆ ಗುರು, ಶನಿ ಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸೌರವ್ಯೂಹದ ಎರಡು ಬೃಹತ್ ಗ್ರಹಗಳಾದ ಗುರು ಮತ್ತು ಶನಿ ಡಿಸೆಂಬರ್‌ ತಿಂಗಳಿನಲ್ಲಿ ಬಹಳ ಸಮೀಪವಿದ್ದಂತೆ ಕಾಣುತ್ತವೆ. ಸಂಜೆಯ ಪಶ್ಚಿಮ ಆಕಾಶದಲ್ಲಿ ಜೋಡಿ ಗ್ರಹಗಳು ಆಕರ್ಷಣೀಯವಾಗಿ ಕಾಣುತ್ತವೆ ಎಂದು ಪೂರ್ಣಪ್ರಜ್ಞ ಅಮೆಚೂರ್‌ ಆಸ್ಟ್ರೋನಾಮರ್ಸ್‌ ಕ್ಲಬ್‌ನ ಸಂಸ್ಥಾಪಕ ಸಹ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಗುರುಗ್ರಹವು ಸೂರ್ಯನನ್ನು ಒಮ್ಮೆ ಸುತ್ತಲು 11.9 ವರ್ಷ ಬೇಕಾಗುತ್ತದೆ. ಶನಿಗ್ರಹಕ್ಕೆ 29.5 ವರ್ಷಗಳು ಬೇಕಾಗುತ್ತದೆ. ಪ್ರತಿ 20 ವರ್ಷಕ್ಕೊಮ್ಮೆ ಈ ಎರಡು ಗ್ರಹಗಳು ಸಮೀಪದಲ್ಲಿ ಕಾಣುತ್ತವೆಯಾದರೂ ಈ ಸಲ ಹೆಚ್ಚು ಸಮೀಪದಲ್ಲಿ ಕಾಣುತ್ತಿವೆ. ಡಿಸೆಂಬರ್‌ನಲ್ಲಿ ಎರಡೂ ಗ್ರಹಗಳು ಪ್ರತಿದಿನ ಹತ್ತಿರಕ್ಕೆ ಬಂದು 21ರಂದು ಕನಿಷ್ಠ ಅಂತರಕ್ಕೆ ಬರಲಿವೆ.

ಹಿಂದೆ 1,226, ಮಾರ್ಚ್ 4ರಂದು ಗುರು ಹಾಗೂ ಶನಿ ತೀರಾ ಹತ್ತಿರಕ್ಕೆ ಬಂದಿದ್ದವರು. ಮುಂದೆ, 2,080 ಹಾಗೂ 2,400ರಲ್ಲಿ ಈ ಗ್ರಹಮಗಳು ಮತ್ತೆ ಸಮೀಪದಲ್ಲಿ ಕಾಣಲಿವೆ. ಇದೊಂದು ಅಪರೂಪದ ಆಕಾಶದ ವಿದ್ಯಮಾನ ಎಂದು ಎ.ಪಿ.ಭಟ್ ತಿಳಿಸಿದ್ದಾರೆ.

ಗುರು ಗ್ರಹವು ಭೂಮಿಯಿಂದ ಸುಮಾರು 89 ಕೋಟಿ ಕಿ.ಮೀ. ದೂರದಲ್ಲಿದೆ. ಶನಿ ಗ್ರಹವು ಗುರು ಗ್ರಹದಿಂದ ಅಷ್ಟೇ ಆಳದಲ್ಲಿದೆ. ಅಂದರೆ ಭೂಮಿಯಿಂದ ಸುಮಾರು 159 ಕೋಟಿ ಕಿ.ಮೀ. ದೂರದಲ್ಲಿದೆ. ಆದರೂ, ಭೂಮಿಯಿಂದ ನೋಡುವಾಗ ಸಮೀಪ ಬಂದಂತೆ ಭಾಸವಾಗುತ್ತವೆ. ಇದೂ ಆಕಾಶದಲ್ಲಿ ನಡೆಯುವ ಚಮತ್ಕಾರ. ಖಗೋಳ ಆಸಕ್ತರು ಇದನ್ನು ನೋಡಿ ಆನಂದಿಸಬೇಕು ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು