ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನತ್ತ ‘ಪಾರ್ಕರ್‌ ಸೋಲಾರ್‌ ಪ್ರೋಬ್‌’ ಉಡಾವಣೆ ಮುಂದೂಡಿದ ನಾಸಾ

Last Updated 11 ಆಗಸ್ಟ್ 2018, 8:58 IST
ಅಕ್ಷರ ಗಾತ್ರ

ತಂಪಾ, ಅಮೆರಿಕ:ಸೂರ್ಯನ ಹೊರಗಿನ ಮೇಲ್ಮೈ ಪ್ರದೇಶದ ಅಧ್ಯಯನಕ್ಕೆ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ(ನಾಸಾ) ಮಹತ್ವಾಕಾಂಕ್ಷೆಯ ‘ಪಾರ್ಕರ್‌ ಸೋಲಾರ್‌ ಪ್ರೋಬ್‌ (ಪಿಎಸ್‌ಪಿ)’ ಬಾಹ್ಯಾಕಾಶ ರೋಬೊ ನೌಕೆಯ ಉಡಾವಣೆಯನ್ನು ಶನಿವಾರ ಮುಂದೂಡಿತು.

ಉಡಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ನಾಸಾ ಉಡಾವಣೆಯ ಕಾರ್ಯಗಳನ್ನು ಆ.10ರಿಂದು(ಶುಕ್ರವಾರ)ಆರಂಭಿಸಿತ್ತು. ನೌಕೆಯನ್ನು ಹೊತ್ತೊಯ್ಯುವ ಉಡಾವಣಾ ವಾಹಕ ನೆಲದಿಂದ ಚಿಮ್ಮಲು ಸಿದ್ಧವಾಗಿತ್ತು.ಇಂದು ಬೆಳಿಗ್ಗೆ 3.33ಕ್ಕೆ(ಸ್ಥಳೀಯ ಕಾಲಮಾನ) (ಭಾರತೀಯ ಕಾಲಮಾನ ಮಧ್ಯಾಹ್ನ 1.3ಕ್ಕೆ) ಉಡಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಬಳಿಕ ಸಮವನ್ನು ಬದಲಾಯಿಸಿ ಸ್ಥಳೀಯ ಕಾಲಮಾನ 4.28ಕ್ಕೆ(ಭಾರತೀಯ ಕಾಲಮಾನ 2.8ಕ್ಕೆ) ನಿಗಧಿ ಮಾಡಿತು. ಅದಾದ ಬಳಿಕ ಉಡಾವಣೆಯನ್ನು ರದ್ದುಪಡಿಸಿ, ಭಾನುವಾರ ಬೆಳಿಗ್ಗೆ ಉಡಾವಣೆ ಮಾಡಲಾಗುವುದು. ಉಡಾವಣಾ ಸಮಯವನ್ನು ತಿಳಿಸಲಾಗುವುದು ಎಂದು ನಾಸಾ ಟ್ವಿಟ್‌ ಮಾಡಿತು.

ಫ್ಲಾರಿಡಾದ ಕೇಪ್‌ ಕೆನವರಾಲ್‌ನಿಂದ ನೌಕೆಯನ್ನು ಹೊತ್ತು ಡೆಲ್ಟಾ –4 ಉಡಾವಣಾ ವಾಹನ ಆಗಸಕ್ಕೆ ಚಿಮ್ಮಲಿದೆ.

Get ready for liftoff to the Sun! ☀️ Our Parker #SolarProbe spacecraft launches on a @ulalaunch #DeltaIV Heavy rocket for a historic mission to "touch" @NASASun. Set your alarm to watch starting at 3am ET on Saturday, Aug. 11. Details: https://t.co/7dMJIkKDPu pic.twitter.com/uqeFIl3bOe

‘ಶನಿವಾರ ಬೆಳಿಗ್ಗೆ 3.33ಕ್ಕೆ(ಸ್ಥಳೀಯ ಕಾಲಮಾನ) ಆಗಸಕ್ಕೆ ಉಡಾವಣೆಯಾಗಲಿದೆ. ಇದಕ್ಕೆ ಹವಾಮಾನ ಶೇ 70ರಷ್ಟು ಪೂರಕವಾಗಿದೆ’ ಎಂದು ನಾಸಾ ತಿಳಿಸಿತ್ತು.

ಸುಮಾರು 62 ಲಕ್ಷ ಕಿಲೋ ಮೀಟರ್‌ ದೂರದ ಸೂರ್ಯನ ಹೊರಭಾಗ (ಕರೋನ) ಪ್ರವೇಶಿಸಿ ಅಧ್ಯಯನ ನಡೆಸುವ ಪ್ರಯತ್ನಇದಾಗಿದೆ. 60 ವರ್ಷಗಳ ಹಿಂದೆ ಸೌರಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳ ವಿಜ್ಞಾನಿ ‘ಯುಗೀನ್‌ ಪಾರ್ಕರ್‌’ ಗೌರವಾರ್ಥ ಅವರ ಹೆಸರನ್ನೇ ನೌಕೆಗೆ ಇಡಲಾಗಿದೆ.

‘ಪಾರ್ಕರ್‌ ಸೋಲಾರ್‌ ಅಧ್ಯಯನವು, ಸೌರವ್ಯೂಹದಲ್ಲಿ ಭೂಮಿಗೆ ಯಾವಾಗ ಅಪಾಯ ಒದಗಬಹುದು ಎಂಬುದನ್ನು ಅಂದಾಜಿಸಲು ನೆರವಾಗಲಿದೆ’ ಎಂದು ಅಧ್ಯಯನ ತಂಡದಲ್ಲಿರುವ ವಿಜ್ಞಾನಿ ಹಾಗೂ ಮಿಚಿಗನ್‌ ವಿವಿಯ ಪ್ರೊಫೆಸರ್‌ ಜಸ್ಟೀನ್‌ ಕಾಸ್ಪೆರ್‌ ಹೇಳಿದ್ದರು.

‘ಪಾರ್ಕರ್‌ ಸೋಲಾರ್‌ ಪ್ರೋಬ್‌’ ಉಡಾವಣೆಯ ನೇರ ಪ್ರಸಾರವನ್ನು (https://www.facebook.com/NASASunScience/videos/1754265537953995/) ನಾಸಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಸಾರ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT