ವ್ಯಾನ್ ಹಾರ್ನ್(ಅಮೆರಿಕ): ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ‘ಬ್ಲ್ಯೂ ಒರಿಜಿನ್’ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಈ ಹಿಂದೆ 1963ರಲ್ಲಿ ಸೋವಿಯತ್ ರಷ್ಯಾದ ಮಹಿಳಾ ಗಗನಯಾತ್ರಿ ವ್ಯಾಲೆಂಟಿನಾ ತೆರೆಷ್ಕೋವಾ ಏಕಾಂಗಿಯಾಗಿ ಬಾಹ್ಯಾಕಾಶ ಯಾನ ಮಾಡಿದ್ದರು.

‘ಬ್ಲ್ಯೂ ಒರಿಜಿನ್’ ಅಮೆಜಾನ್ ಕಂಪನಿ ಮಾಲೀಕ ಜೆಫ್ ಬೆಜೋಸ್ ಅವರ ಒಡೆತನದ ಕಂಪನಿಯಾಗಿದೆ.

ಈ ತಂಡದಲ್ಲಿ ಪಾಪ್ ಗಾಯಕಿ ಕೇಟಿ ಪೆರಿ, ಜೆಫ್ ಬೆಜೋಸ್ ಸಂಗಾತಿ ಲಾರೆನ್ ಸಂಚೆಜ್, ಪತ್ರಕರ್ತೆ ಗೇಲ್ ಕಿಂಗ್, ನಾಗರಿಕ ಹಕ್ಕುಗಳ ಕಾರ್ಯಕರ್ತೆ ಅಮಂಡಾ ನ್ಗುಯೆನ್, ಏರೋಸ್ಪೇಸ್ ಎಂಜಿನಿಯರ್ ಐಶಾ ಬೋವ್ ಮತ್ತು ಚಲನಚಿತ್ರ ನಿರ್ಮಾಪಕಿ ಕೆರಿಯಾನ್ನೆ ಫ್ಲಿನ್ ಇದ್ದಾರೆ.

ಇಂದು(ಸೋಮವಾರ) ಸಂಜೆ 7 ಗಂಟೆಗೆ ಬ್ಲ್ಯೂ ಒರಿಜಿನ್ನ ‘ನ್ಯೂ ಶೆಪರ್ಡ್’ ಗಗನನೌಕೆ ಟೆಕ್ಸಾಸ್ ಪಶ್ಚಿಮ ಭಾಗದ ಮರುಭೂಮಿ ಪ್ರದೇಶದಲ್ಲಿರುವ ಉಡ್ಡಯನ ಕೇಂದ್ರದಿಂದ ನಭಕ್ಕೆ ಜಿಗಿಯಲಿದೆ.

ಈ ಮಿಷನ್ಗೆ ಎನ್ಎಸ್–31 ಎಂದು ಹೆಸರಿಡಲಾಗಿದ್ದು, ನ್ಯೂ ಶೆಪರ್ಡ್ ಗಗನನೌಕೆಯ 31ನೇ ಯಾನ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.