ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಉಂಗುರ ತೊಡಿಸಿದ ರೀತಿಯಲ್ಲಿ (ರಿಂಗ್ ಆಫ್ ಫೈರ್) ಸೂರ್ಯ ಗ್ರಹಣ ಕಾಣಿಸಲಿದೆ

ಎಷ್ಟೊತ್ತಿಗೆ ಘಟಿಸಲಿದೆ?

‘ಟೈಮ್‌ಆ್ಯಂಡ್‌ಡೇಟ್ ಡಾಟ್ ಕಾಂ’ ಪ್ರಕಾರ ಜೂನ್ 10ರ ಸೂರ್ಯಗ್ರಹಣ ಭಾರತೀಯ ಕಾಲಮಾನ ಮಧ್ಯಾಹ್ನ 1:42ಕ್ಕೆ ಆರಂಭಗೊಂಡು 6:41ಕ್ಕೆ ಕೊನೆಗೊಳ್ಳಲಿದೆ.

ಎಲ್ಲೆಲ್ಲಿ ಕಾಣಿಸಲಿದೆ ಗ್ರಹಣ?

ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾ ಪ್ರಕಾರ ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ರಷ್ಯಾದಲ್ಲಿ ಗ್ರಹಣ ಗೋಚರವಾಗಲಿದೆ. ಕೆನಡಾದಲ್ಲಿ ಮೂರು ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ.

ಓದಿ:2021ರಲ್ಲಿ ಒಟ್ಟು ನಾಲ್ಕು ಗ್ರಹಣ ಸಂಭವ; ಭಾರತದಲ್ಲಿ ಎರಡು ಗೋಚರ

ಗ್ರಹಣವು ಪೂರ್ಣಪ್ರಮಾಣದಲ್ಲಿದ್ದಾಗ ಗ್ರೀನ್‌ಲ್ಯಾಂಡ್‌ನಲ್ಲಿ ಕಾಣಿಸಲಿದೆ. ಸೈಬೀರಿಯಾ ಮತ್ತು ಉತ್ತರ ಧ್ರುವದಲ್ಲಿಯೂ ಗ್ರಹಣ ಕಾಣಿಸಲಿದೆ. ಭಾರತ, ಅಮೆರಿಕದಲ್ಲಿ ಗ್ರಹಣ ಕಾಣಿಸಲಾರದು. ಪೂರ್ವ ಕರಾವಳಿ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಭಾಗಶಃ ಗೋಚರಿಸಲಿದೆ.

ಉಂಗುರ ಗ್ರಹಣಕ್ಕೆ ಕಾರಣವೇನು?

ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಯಿಂದ ಬಹು ದೂರದಲ್ಲಿದ್ದಾಗ ಸೂರ್ಯನಿಗೆ ಅಡ್ಡ ಬರುವ ಪರಿಣಾಮ ಉಂಗುರ ತೊಡಿಸಿದ ರೀತಿಯಲ್ಲಿ ಗ್ರಹಣ ಕಾಣಿಸಲಿದೆ ಎಂದು ನಾಸಾ ಹೇಳಿದೆ. ದೂರದಲ್ಲಿರುವ ಕಾರಣ ಚಂದ್ರನು ಸ್ವಲ್ಪ ಚಿಕ್ಕದಾಗಿ ಕಾಣಿಸಿಕೊಳ್ಳುವುದಲ್ಲದೆ ಸೂರ್ಯನ ಬೆಳಕು ಭೂಮಿಗೆ ಬರುವುದನ್ನು ಸಂಪೂರ್ಣವಾಗಿ ತಡೆಯುವುದಿಲ್ಲ. ಹೀಗಾಗಿ ಉಂಗುರ ತೊಡಿಸಿದ ಮಾದರಿಯಲ್ಲಿ ಅದು ಕಾಣಿಸಿಕೊಳ್ಳಲಿದೆ.

ಮುಂದಿನ ಸೂರ್ಯಗ್ರಹಣ ಯಾವಾಗ?

ಈ ವರ್ಷದ ಇನ್ನೊಂದುಸೂರ್ಯಗ್ರಹಣ ಡಿಸೆಂಬರ್ 4ಕ್ಕೆ ಘಟಿಸಲಿದೆ. ಇದೂ ಸಹ ಭಾರತದಲ್ಲಿ ಕಾಣಿಸಲಾರದು ಎನ್ನಲಾಗಿದೆ.

ಓದಿ:ಕ್ಷೀರ ಪಥದ ಅತ್ಯದ್ಭುತ ಚಿತ್ರ ಬಿಡುಗಡೆ ಮಾಡಿದ ನಾಸಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.