ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿಗಣ್ಣಿಗೆ ಕಾಣಲಿದೆ ‘ಸ್ವಾನ್’ ಧೂಮಕೇತು

ಮೇ 25ರವರೆಗೆ ಸೂರ್ಯನ ಬಳಿ ಕಾಣಲಿದೆ ಅಪರೂಪದ ಆಕಾಶಕಾಯ
Last Updated 12 ಮೇ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಆಗಸದಲ್ಲಿ ಬುಧವಾರ ಬೆಳಿಗ್ಗೆ ಅಪರೂಪದ ವಿದ್ಯಮಾನವೊಂದು ಘಟಿಸಲಿದ್ದು, ಮೇ 20ರವರೆಗೆ ಇದು ಮುಂದುವರಿಯಲಿದೆ. ‘ಸ್ವಾನ್’ ಹೆಸರಿನ ಧೂಮಕೇತುವೊಂದು ಸೂರ್ಯನ ಸುತ್ತ ಸುತ್ತುತ್ತಿದ್ದು, ಭೂಮಿಯ ಸಮೀಪಕ್ಕೆ ಬರುತ್ತಿದೆ.

‘ಪ್ರಾರಂಭದ ದಿನಗಳಲ್ಲಿ ಬೆಳಿಗ್ಗೆ 4.30ರ ವೇಳೆಗೆ ‘ಸ್ವಾನ್‌’ ಧೂಮಕೇತು ಕಾಣಿಸಿಕೊಳ್ಳಲಿದೆ. ಕತ್ತಲಿನಲ್ಲಿ ಇದು ಪ್ರಕಾಶಮಾನವಾಗಿರುವುದರಿಂದ ಬರಿಗಣ್ಣಿನಲ್ಲೇ ನೋಡಬಹುದು. ಸೂರ್ಯೋದಯದ ನಂತರ ವೀಕ್ಷಿಸಲು ದೂರದರ್ಶಕದ ಸಹಾಯ ಬೇಕಾಗುತ್ತದೆ’ ಎಂದುಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಜಿ. ಗಲಗಲಿ.

ಭೂಮಿಯಿಂದ 8.33 ಕೋಟಿ ಕಿ.ಮೀ. ದೂರದಲ್ಲಿ 'ಸ್ವಾನ್' ಹಾದು ಹೋಗಲಿದೆ. ಸೆಕೆಂಡ್‌ಗೆ 40 ಕಿ.ಮೀ.ನಿಂದ 50 ಕಿ.ಮೀ. ವೇಗದಲ್ಲಿ ಇದು ಬರಲಿದೆ. ಈ ರೀತಿ ಭೂಮಿ ಸನಿಹಕ್ಕೇ ಬಂದು ಬರಿಗಣ್ಣಿಗೆ ಉಜ್ವಲವಾಗಿ ಗೋಚರಿಸುವ ಧೂಮಕೇತುಗಳು ಬಹಳ ವಿರಳ. ಹೀಗಾಗಿ, 'ಸ್ವಾನ್' ಗೋಚರಿಸುವಿಕೆ ಕುತೂಹಲ ಕೆರಳಿಸಿದೆ ಎಂದು ಅವರು ಹೇಳುತ್ತಾರೆ.

'ಈ ಧೂಮಕೇತು 5.7 ಪ್ರಕಾಶಮಾನವನ್ನು (ಮ್ಯಾಗ್ನಿಟ್ಯೂಡ್ ) ಹೊಂದಿದೆ. 6ರಷ್ಟು ಕಾಂತಿ ಹೊಂದಿರುವ ಯಾವುದೇ ಆಕಾಶಕಾಯ ಬರಿಗಣ್ಣಿಗೆ ಕಾಣುತ್ತದೆ’ ಎಂದು ಅವರು ಹೇಳಿದರು.

‘ಧೂಮಕೇತು ಮೀನರಾಶಿಯಲ್ಲಿದ್ದು ಮೇ 15ರ ಹೊತ್ತಿಗೆ ತ್ರಿಕೋನ ರಾಶಿಗೆ ಹೋಗುತ್ತದೆ. ದಿನಕಳೆದಂತೆ ಗೋಚರಿಸುವ ಸಮಯದಲ್ಲಿ ವ್ಯತ್ಯಾಸವಾಗಲಿದ್ದು, ಮೇ 15ರ ವೇಳೆಗೆ ಬೆಳಿಗ್ಗೆ 5.30ಕ್ಕೆ ಗೋಚರಿಸಬಹುದು. ಮೇ 25ರವರೆಗೆ ಇದರ ಹೊಳಪು ಹೆಚ್ಚಾದರೂ, ಸೂರ್ಯನ ಸಮೀಪಕ್ಕೆ ಹೋಗುವುದರಿಂದ ಸೂರ್ಯನ ಪ್ರಖರ ಬೆಳಕಲ್ಲಿ ಧೂಮಕೇತು ಕಾಣಿಸದು’ ಎಂದು ಅವರು ತಿಳಿಸಿದರು.

‘ದಕ್ಷಿಣ ಗೋಳಾರ್ಧವನ್ನೂ ಇದು ಪ್ರವೇಶಿಸುವುದರಿಂದ ರಾಜ್ಯದಲ್ಲಿಯೂ ಕಾಣಿಸಿಕೊಳ್ಳಲಿದೆ. ಆದರೆ, ರಾಜ್ಯದಲ್ಲಿನಿರ್ದಿಷ್ಟ ಪ್ರದೇಶದಲ್ಲಿ ಗೋಚರಿಸುತ್ತದೆ ಎಂಬ ಬಗ್ಗೆ ಆಧಾರವಿಲ್ಲ. ಒಂದು ಪ್ರದೇಶಕ್ಕೂ ಮತ್ತೊಂದು ಪ್ರದೇಶಕ್ಕೂ ಅದು ಗೋಚರಿಸುವ ಸಮಯದಲ್ಲಿ ಎರಡರಿಂದ ಮೂರು ನಿಮಿಷ ವ್ಯತ್ಯಾಸವಾಗಬಹುದಷ್ಟೇ’ ಎಂದು ಗಲಗಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT