ಲಂಡನ್: ಕೋವಿಡ್ 19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವಯಾವ ರೋಗಿಗಳಲ್ಲಿ ‘ಸಾವಿನ ಅಪಾಯ‘ ಎಷ್ಟಿದೆ ಎಂದು ಅಂದಾಜಿಸುವ ನಾಲ್ಕು ಹಂತಗಳ ‘4 ಸಿ‘ ಎಂಬ ಹೊಸ ಪರಿಕರ ಅಥವಾ ಮಾದರಿಯನ್ನು ಬ್ರಿಟನ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

‘4ಸಿ‘ ಎಂದರೆ ಕೊರೊನಾವೈರಸ್ ಕ್ಲಿನಿಕಲ್ ಕ್ಯಾರೆಕ್ಟರೈಸೇಷನ್ ಕನ್ಸೋರ್ಟಿಯಂ (Coronavirus Clinical Characterisation Consortium).‘ಈ ಮಾದರಿ ಸಾವಿನ ಅಪಾಯದಲ್ಲಿರುವ ರೋಗಿಗಳನ್ನು ಪತ್ತೆ ಹೆಚ್ಚಿ, ಅವರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವ ಜತೆಗೆ ತೀವ್ರಾ ನಿಗಾದೊಂದಿಗೆ ಆರೈಕೆ ಮಾಡಲು ವೈದ್ಯರಿಗೆ ಸಹಾಯವಾಗುತ್ತದೆ‘ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

‘4ಸಿ‘ ಹಂತದ ಮಾದರಿಯ ಸಂಶೋಧನಾ ಪ್ರಬಂಧ ಬಿಎಂಜೆ ವೈದ್ಯಕೀಯ ಜರ್ನಲ್ನಲ್ಲಿ ಬುಧವಾರ ಪ್ರಕಟವಾಗಿದೆ. ಕೋವಿಡ19 ಸೋಂಕಿನಿಂದ ಬಳಲುತ್ತಿರುವರನ್ನು ‘ಕಡಿಮೆಯಿಂದ ಮಧ್ಯಮ, ಹೆಚ್ಚು(Low to Medium, High) ಅಪಾಯವಿರುವವರು‘ ಅಥವಾ ‘ಹೆಚ್ಚು ಅಪಾಯದೊಂದಿಗೆ ಸಾವಿನಂಚಿನಲ್ಲಿರುವರು (Low toMortality risk)‘ ಎಂದು ವಿಭಾಗಿಸುತ್ತಾರೆ.

ಕೊರೊನಾ ವೈರಸ್ನಿಂದ ಬಳಲುತ್ತಿರುವ ಕೆಲವು ರೋಗಿಗಳು ಸಾವಿನ ಅಂಚಿಗೆ ತಲುಪುತ್ತಾರೆ. ಆಸ್ಪತ್ರೆಗೆ ದಾಖಲಾಗುವ ಇಂಥ ರೋಗಿಗಳಲ್ಲಿನ ಅಪಾಯದ ಪ್ರಮಾಣ ಗುರುತಿಸುವುದು ವೈದ್ಯರಿಗೆ ಸವಾಲಾಗುತ್ತಿದೆ. ಹೀಗೆ ಅಪಾಯದಲ್ಲಿರುವ ಕೋವಿಡ್ 19 ರೋಗಿಗಳನ್ನು ತ್ವರಿತವಾಗಿ ಗುರುತಿಸಿ, ಅವರಿಗೆ ನಿಗದಿತ ಚಿಕಿತ್ಸೆಯನ್ನು ನೀಡಲು ನಿಖರ ಹಾಗೂ ವೇಗವಾಗಿ ಅಪಾಯದ ಮುನ್ಸೂಚನೆ ನೀಡುವ ಸಾಧನಗಳು ಬೇಕಾಗುತ್ತವೆ.

ಈ 4ಸಿ– ಮಾದರಿಯಲ್ಲಿ ರೋಗಿಯ ವಯಸ್ಸು, ಲಿಂಗ, ಆರೋಗ್ಯ ಪರಿಸ್ಥಿತಿ, ಉಸಿರಾಟ ಮತ್ತು ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣದಂತಹ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಅಪಾಯದ ಹಂತವನ್ನು ಗುರುತಿಸಿ, ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಈಗಾಗಲೇ ನಡೆಸಿರುವ ಅಧ್ಯಯನದ ಪ್ರಕಾರ, ಈ ರಿತಿ ಅಪಾಯವನ್ನು ಪತ್ತೆ ಹಚ್ಚುವ ಬೇರೆ ಬೇರೆ 15 ಮಾದರಿಗಳಿಗೆ ಹೋಲಿಸಿದರೆ, ‘4ಸಿ‘ ಮಾದರಿ ಹೆಚ್ಚು ನಿಖರವಾಗಿ ಮಾಹಿತಿ ನೀಡುತ್ತಿದೆ. ಇದು ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡಬಹುದೆಂದು ಬೇಗ ತೀರ್ಮಾನಕ್ಕೆ ಬರಲು ಸಹಕಾರಿಯಾಗಿದೆ‘ ಎಂದು ಸಂಶೋಧಕರು ತಿಳಿಸಿದ್ದಾರೆ.

‘ರೋಗಿಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲು ವೈದ್ಯರಿಗೆ ಈ ಮಾದರಿ ಸಹಾಯ ಮಾಡುತ್ತದೆ‘ ಎಂದು ಈ ಸಂಶೋಧನೆಯ ಸಹ ನೇತೃತ್ವವಹಿಸಿರುವ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಶಸ್ತ್ರಚಿಕಿತ್ಸೆ ಮತ್ತು ದತ್ತಾಂಶ ವಿಜ್ಞಾನದ ಪ್ರಾಧ್ಯಾಪಕ ಎವೆನ್ ಹ್ಯಾರಿಸನ್ ಹೇಳಿದ್ದಾರೆ.

‘ವಿವಿಧ ಡೇಟಾಗಳನ್ನು ಆಧರಿಸಿ ರೋಗಿಗಳ ಅಪಾಯ ಮಟ್ಟವನ್ನು ಅಳತೆ ಮಾಡಲಾಗುತ್ತದೆ. ರೋಗದ ಪ್ರಮಾಣಕ್ಕೆ 0 ಯಿಂದ 21ರವರೆಗೆ ಅಂಕಗಳನ್ನು ನೀಡಲಾಗುತ್ತದೆ. ಯಾವ ರೋಗಿಗೆ 15 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಬರುತ್ತವೆಯೋ ಅವರು ಶೇ 62ರಷ್ಟು ಹೆಚ್ಚು ತೊಂದರೆ ಎದುರಿಸುತ್ತಿರುತ್ತಾರೆ. ಇವರು 3 ಅಥವಾ ಅದಕ್ಕಿಂತ ಕಡಿಮೆ ಅಂಕ ತೆಗೆದುಕೊಂಡ ರೋಗಿಗಳಿಗೆ ಹೋಲಿಸಿದರೆ ಶೇ 1ರಷ್ಟು ಹೆಚ್ಚು ಅಪಾಯ ಎದುರಿಸುತ್ತಿರುತ್ತಾರೆ‘ ಎಂಬುದು ಸಂಶೋಧಕರ ಅಭಿಪ್ರಾಯ.

ಸಂಶೋಧಕರ ಪ್ರಕಾರ, ‘3 ಅಥವಾ ಅದಕ್ಕಿಂತ ಕಡಿಮೆ ಅಂಕಗಳನ್ನು ಪಡೆದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ. ಮಧ್ಯಮ ಮತ್ತು ಹೆಚ್ಚು ಅಪಾಯ ಹೊಂದಿರುವ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಜತೆಗೆ, ಸ್ಟಿರಾಯ್ಡ್ನಂತಹ ಔಷಷಧಗಳನ್ನು ನೀಡಬೇಕಾಗಬಹುದು ಮತ್ತು ಅಗತ್ಯವಿದ್ದರೆ ತುರ್ತು ನಿಗಾ ಘಟಕಗಳಿಗೆ ದಾಖಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.