ಬುಧವಾರ, ಡಿಸೆಂಬರ್ 2, 2020
25 °C

ಸಾವಿರಕ್ಕೆ ಒಂದು ಪೋಸ್ಟ್‌ನಲ್ಲಿ ದ್ವೇಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ತನ್ನ ವೇದಿಕೆಯಲ್ಲಿ ದ್ವೇಷ ಬಿತ್ತುವ ಮಾತುಗಳು ಯಾವ ಪ್ರಮಾಣದಲ್ಲಿ ಪ್ರಕಟವಾಗುತ್ತಿವೆ ಎಂಬುದನ್ನು ಫೇಸ್‌ಬುಕ್‌ ಬಹಿರಂಗಪಡಿಸಿದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಪ್ರಕಟವಾದ ಪ್ರತಿ 10 ಸಾವಿರ ಪೋಸ್ಟ್‌ಗಳ ಪೈಕಿ 10–11ರಲ್ಲಿ ದ್ವೇಷ ಬಿತ್ತುವ ಅಂಶಗಳಿದ್ದವು ಎಂದು ಹೇಳಿದೆ.

‘ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯ ಫಲವಾಗಿ ಬಳಕೆದಾರರಿಂದ ದೂರು ಬರುವ ಮುನ್ನವೇ ಸಾಕಷ್ಟು ದ್ವೇಷಭಾಷಣಗಳನ್ನು ಗುರುತಿಸಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ’ ಎಂದು ಸಂಸ್ಥೆ ಹೇಳಿದೆ.

ದ್ವೇಷವನ್ನು ಪ್ರಸಾರ ಮಾಡುವ 2.21 ಕೋಟಿ ಪೋಸ್ಟ್‌ಗಳ ವಿರುದ್ಧ ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯು ಕ್ರಮ ಕೈಗೊಂಡಿದೆ. ಅದರಲ್ಲಿ ಶೇ 95ಕ್ಕೂ ಹೆಚ್ಚು ಪೋಸ್ಟ್‌ಗಳ ವಿರುದ್ಧ ಗ್ರಾಹಕರಿಂದ ದೂರುಗಳು ಬರುವುದಕ್ಕೂ ಮುನ್ನ ಕ್ರಮ ಕೈಗೊಳ್ಳಲಾಗಿದೆ.

‘ಕೃತಕ ಬುದ್ಧಿಮತ್ತೆ ಬಳಕೆಯಲ್ಲಿ ಸುಧಾರಣೆಯಾಗಿದ್ದರಿಂದ ಇಂಥ ಪೋಸ್ಟ್‌ಗಳನ್ನು ಪತ್ತೆ ಮಾಡುವುದು ಸುಲಭವಾಗಿದೆ. ಈ ತಂತ್ರಜ್ಞಾನಗಳನ್ನು ಇನ್ನಷ್ಟು ಭಾಷೆಗಳಿಗೆ ವಿಸ್ತರಿಸಲಾಗುವುದು’ ಎಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು