ಬುಧವಾರ, ಮಾರ್ಚ್ 22, 2023
21 °C

ರಿಷಿ ಬ್ರಿಟನ್‌ ಪ್ರಧಾನಿ ಹುದ್ದೆಗೇರಿದ್ದಕ್ಕೆ ನೆಹ್ರಾ ಬಗ್ಗೆ ದೂಸ್ರಾ ಮಾತೇಕೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿ ಹುದ್ದೆಗೆ ಏರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಆದರೆ ಈ ನಡುವೆ ಕೆಲವರು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಆಶಿಶ್‌ ನೆಹ್ರಾ ಅವರನ್ನು ಎಳೆದು ಜಗ್ಗಾಡುತ್ತಿದ್ದಾರೆ.

ರಿಷಿ ಅವರ ಜೊತೆಗೆ ನೆಹ್ರಾ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಕೆಲವರು ಆಶಿಶ್‌ ನೆಹ್ರಾ ಅವರು ಬಾಲಕ ವಿರಾಟ್‌ ಕೊಹ್ಲಿ ಜೊತೆಗಿನ ಫೋಟೊಗೆ 'ರಿಷಿ ಸುನಕ್‌ ಜೊತೆ ವಿರಾಟ್‌ ಕೊಹ್ಲಿ' ಎಂಬ ಶೀರ್ಷಿಕೆ ನೀಡಿ ನಗೆಗಡಲಲ್ಲಿ ತೇಲಿಸಿದ್ದಾರೆ. ಇದು 2003ರ ವಿಶ್ವಕಪ್‌ ಬಳಿಕ ವಿರಾಟ್‌ ಕೊಹ್ಲಿ ಅವರ ತರಬೇತುದಾರ ರಾಜ್‌ ಕುಮಾರ್‌ ಶರ್ಮಾ ಅವರು ತಮ್ಮ ಅಕಾಡೆಮಿಗೆ ಆಹ್ವಾನಿಸಿದ್ದ ಸಂದರ್ಭ ತೆಗೆದ ಫೋಟೊ ಆಗಿದೆ. ಚಿತ್ರದಲ್ಲಿ ಬಾಲಕ ಕೊಹ್ಲಿಯ ಹಿಂದೆ ತರಬೇತುದಾರ ಶರ್ಮಾ ಇದ್ದಾರೆ.

ಕೋಹಿನೂರ್‌ ವಜ್ರವನ್ನು ವಾಪಸ್‌ ತರುವಂತೆ ಆಶಿಶ್‌ ನೆಹ್ರಾಗೆ ವಿನಂತಿಸಲಾಗುತ್ತಿದೆ. ರಿಷಿ ಸುನಕ್‌ ಅವರನ್ನು ಭಾರತಕ್ಕೆ ಆಹ್ವಾನಿಸಬೇಕು. ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ರಿಷಿ ಅವರನ್ನು ಅಪಹರಿಸಬೇಕು. ನಂತರ ಆಶಿಶ್‌ ನೆಹ್ರಾ ಅವರನ್ನು ಬ್ರಿಟನ್‌ಗೆ ಕಳಿಸಬೇಕು. ಈ ಮೂಲಕ ಕೋಹಿನೂರ್‌ ವಜ್ರವನ್ನು ಭಾರತಕ್ಕೆ ವಾಪಸ್‌ ಮಾಡುವ ಮಸೂದೆ ಅಂಗೀಕರಿಸುವಂತೆ ಮಾಡಬೇಕು ಎಂಬೆಲ್ಲ ಕಿಲಾಡಿ ಐಡಿಯಾಗಳು ಹರಿದಾಡುತ್ತಿವೆ.

ರಿಷಿ ಸುನಕ್‌ ಜೊತೆಗೆ ಆಶಿಶ್‌ ನೆಹ್ರಾ ಅವರನ್ನು ತಳುಕು ಹಾಕಿ ಕಾಲೆಳೆಯಲು ಕಾರಣ ಇಬ್ಬರೂ ಪರಸ್ಪರ ಹೋಲುವಂತೆ ಕಾಣುತ್ತಾರೆ. ಇಬ್ಬರ ನಗುವಿನಲ್ಲಿ ಸಾಮ್ಯತೆ ಇದ್ದಂತಿರುವ ಫೋಟೊಗಳು ಟ್ವಿಟರ್‌ನಲ್ಲಿ ಕಚಗುಳಿ ಇಡುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು