ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪ ಸುಳ್ಳು: ಕಡೆಗೂ ಯೂಟ್ಯೂಬರ್ ಕ್ಷಮೆ ಕೇಳಿದ ‘ಬಾಬಾ ಕಾ ಡಾಬಾ‘ದ ಕಾಂತಾ ಪ್ರಸಾದ್

ಮತ್ತೊಂದು ವೈರಲ್ ವಿಡಿಯೋ
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಸುದ್ದಿಯಾಗಿದ್ದ ದೆಹಲಿಯ 'ಬಾಬಾ ಕಾ ಡಾಬಾ'ದ ಮಾಲೀಕ ಕಾಂತಾ ಪ್ರಸಾದ್ ಈ ವರ್ಷವೂ ಕೂಡ ಸುದ್ದಿಯಲ್ಲಿದ್ದಾರೆ.

ತನ್ನನ್ನು ಬೆಳಕಿಗೆ ತಂದಿದ್ದ ಯೂಟ್ಯೂಬರ್ ಗೌರವ್ ವಾಸನ್ ವಿರುದ್ಧ‘ನನ್ನ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡಿದ್ದಾನೆ’ ಎಂದುಕಾಂತಾ ಪ್ರಸಾದ್ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು.

ಇದೀಗ ಮತ್ತೆ ಮಾತನಾಡಿರುವ ಕಾಂತಾ ಪ್ರಸಾದ್, ‘ನಾನು ಆ ರೀತಿ ಹೇಳಬಾರದಿತ್ತು. ಗೌರವ್ ವಾಸನ್ ಒಳ್ಳೆ ಮನುಷ್ಯ. ಅವನು ಕಳ್ಳ, ವಸೂಲಿಕೋರನಲ್ಲ. ನಾನು ಆಡಿರುವ ಮಾತುಗಳಿಗಾಗಿ ಕೈ ಮುಗಿದು ನಿಮ್ಮ ಕ್ಷಮೆ ಕೇಳುತ್ತೇನೆ’ ಎಂದು ಹಿಂದಿಯಲ್ಲಿ ‘ದಿಲ್ ಸೆ ಫುಡ್ಡಿ‘ ಎಂಬ ಮತ್ತೊಬ್ಬ ಯುಟ್ಯೂಬರ್ ಮಾಡಿರುವ ವಿಡಿಯೋದಲ್ಲಿ ಕೇಳಿಕೊಂಡಿದ್ದಾನೆ.

ದೆಹಲಿಯ ಮಾಳವಿಯಾ ಪ್ರದೇಶದಲ್ಲಿ ಸಣ್ಣ ಪೆಟ್ಟಿಗೆ ಅಂಗಡಿಯೊಂದರಲ್ಲಿ ಹೋಟೆಲ್ ನಡೆಸುತ್ತಿದ್ದ ಕಾಂತಾ ಪ್ರಸಾದ್ ಬಗ್ಗೆ ಕಳೆದ ವರ್ಷ ಗೌರವ್ ವಾಸನ್ ಅವರು, ವಿಡಿಯೋ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಅನೇಕ ಜನ ವೃದ್ಧ ದಂಪತಿಗಳಿಗೆ ಹಣಕಾಸಿನ ನೆರವು ನೀಡಿದ್ದರು.

ನಂತರ ಕಾಂತಾ ಅವರು, ತಾವು 30 ವರ್ಷಗಳಿಂದ ದೆಹಲಿ ಮಾಳವಿಯಾ ಪ್ರದೇಶದಲ್ಲಿ ನಡೆಸುತ್ತಿದ್ದ ಪೆಟ್ಟಿಗೆ ಅಂಗಡಿಯನ್ನು ಬಿಟ್ಟು, 5 ಲಕ್ಷ ರೂಪಾಯಿ ಬಂಡವಾಳದಲ್ಲಿ ಹೋಟೆಲ್ ಆರಂಭಿಸಿದ್ದರು. ಆದರೆ, ಮತ್ತೆ ಕೊರೊನಾ ಎರಡನೇ ಅಲೆಯಿಂದ ಲಾಕ್‌ಡೌನ್ ಆಗಿದ್ದರಿಂದ ಹೊಸ ಹೋಟೆಲ್ ಸರಿಯಾಗಿ ನಡೆಯದೇ ಕಾಂತಾ ಅವರು ನಷ್ಟ ಅನುಭವಿಸಿದರು.

ಅವರು ಇದೀಗ ಹೊಸ ಹೋಟೆಲ್ ಬಿಟ್ಟು ಮತ್ತೆ ತಮ್ಮ ಹಳೆಯ ಪೆಟ್ಟಿಗೆ ಅಂಗಡಿ ಪ್ರಾರಂಭಿಸಿದ್ದಾರೆ. ಹೊಸ ಹೋಟೆಲ್‌ ಆದಾಯಕ್ಕಿಂತ ಖರ್ಚೇ ಜಾಸ್ತಿಯಾಗಿದ್ದರಿಂದ ಅದನ್ನು ಬಿಟ್ಟೆ ಎಂದಿರುವ ಅವರು, ತಾವು ಗೌರವ್ ವಿರುದ್ಧ ಮಾಡಿದ್ದ ಆರೋಪಗಳು ಕುರಿತು ಕ್ಷಮಾಪಣೆ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT