ಬೆಂಗಳೂರಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅಡ್ಡಾದಿಡ್ಡಿ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಈ ರೀತಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಮಾಡಲು 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಪಂಕಜ್ ತನ್ವರ್ ಎನ್ನುವವರು ಎಐ ಆಧಾರಿತ ಕ್ಯಾಮರಾವನ್ನು ಹೆಲ್ಮೆಟ್ಗೆ ಕಟ್ಟಿಕೊಂಡು ನಿಯಮ ಉಲ್ಲಂಘಿಸಿದವರ ಬಗ್ಗೆ ಮಾಹಿತಿಯನ್ನು ನೇರವಾಗಿ ಟ್ರಾಫಿಕ್ ಪೊಲೀಸರಿಗೆ ತಲುಪುವಂತೆ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪಂಕಜ್, ‘ರಸ್ತೆ ಮೇಲೆ ಅನಾಗರಿಕರಂತೆ ಓಡಾಡುವ ಜನರಿಂದ ಬೇಸತ್ತಿದ್ದೇನೆ, ಅದಕ್ಕೆಂದೇ ಸಂಚಾರ ನಿಯಮ ಉಲ್ಲಂಘಿಸುವವರ ಫೋಟೊಗಳನ್ನು ನನ್ನ ಹೆಲ್ಮೆಟ್ ಕ್ಯಾಮರಾದ ಮೂಲಕ ತೆಗೆದು ಎಐ ಮೂಲಕ ಟ್ರಾಫಿಕ್ ಪೊಲೀಸರಿಗೆ ಸಿಗುವಂತೆ ಮಾಡಿದ್ದೇನೆ. ಇದರಿಂದ ಪೊಲೀಸರಿಗೆ ಯಾವ ಜಾಗದಲ್ಲಿ ನಿಯಮ ಉಲ್ಲಂಘನೆಯಾಗಿದೆ, ಸಮಯ, ದಾಖಲೆ, ವಾಹನ ಸಂಖ್ಯೆ ರವಾನೆಯಾಗುತ್ತದೆ’ ಎಂದಿದ್ದಾರೆ.

ರಾಜಸ್ಥಾನದ ಮೂಲದ ಪಂಕಜ್, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದಾರೆ.

‘ನನ್ನ ಸುತ್ತಲೂ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವುದನ್ನು ನೋಡುತ್ತಿದ್ದೆ. ಕೆಲವೊಮ್ಮೆ ಚಾಲಕರು ಅನಗತ್ಯವಾಗಿ ವಾಗ್ವಾದ ನಡೆಸುತ್ತಿದ್ದರು. ಇದಕ್ಕಾಗಿ ನಾನು ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಂಡೆ’ ಎಂದಿದ್ದಾರೆ.

ಈಗಾಗಲೇ ಬೆಂಗಳೂರು ಟ್ರಾಫಿಕ್ ಪೊಲೀಸರು ತಮ್ಮ ಆ್ಯಪ್ ಮೂಲಕ ಜನರು ನೀಡುವ ದೂರುಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಹೆಲ್ಮೆಟ್ ಐಡಿಯಾ ಹುಟ್ಟಿಕೊಳ್ಳಲು ಅದೇ ಕಾರಣ ಎಂದಿದ್ದಾರೆ.

ಲಾಜಿಟೆಕ್ ವೆಬ್ಕ್ಯಾಮರಾವನ್ನು ಹೆಲ್ಮೆಟ್ಗೆ ಅಳವಡಿಸಲಾಗಿದ್ದು, ಇದು ದಾರಿಯಲ್ಲಿ ವಿಡಿಯೊವನ್ನು ಸೆರೆಹಿಡಿಯುತ್ತದೆ. ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುವವರು, ಡಿವೈಡರ್ಗಳನ್ನು ದಾಟುವುದು, ಕೆಂಪು ಬಣ್ಣದ ಸಿಗ್ನಲ್ ಇದ್ದಾಗ ಸಂಚರಿಸುವುದು, ಏಕಮುಖ ರಸ್ತೆಯಲ್ಲಿ ಪ್ರಯಾಣಿಸಿ ನಿಯಮ ಉಲ್ಲಂಘನೆ ಮಾಡುವುದನ್ನು ಪತ್ತೆ ಮಾಡುತ್ತದೆ. ನಿಯಮ ಉಲ್ಲಂಘನೆ ಪತ್ತೆಯಲ್ಲಿ ತಪ್ಪುಗಳಾಗದಂತೆ ತಡೆಯಲು ಓಪನ್ ಎಐನ ಚಾಟ್ಜಿಪಿಟಿ ಮತ್ತು ಗೂಗಲ್ ಜೆಮಿನಿಯನ್ನೂ ಬಳಸಿದ್ದಾರೆ.

ನಿಯಮ ಉಲ್ಲಂಘನೆ ದೃಶ್ಯ ಸೆರೆಯಾಗುತ್ತಿದ್ದಂತೆ ಐದು ಸೆಕೆಂಡ್ಗಳಲ್ಲಿ ಈ ವ್ಯವಸ್ಥೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಶೇ 96ರಷ್ಟು ಸರಿಯಿದೆ ಎಂದು ಖಚಿತಪಡಿಸಿಕೊಂಡು ವರದಿಯನ್ನು ಕಳಿಸುತ್ತದೆ. ಈ ವರದಿ ಇ–ಮೇಲ್ ಮೂಲಕ ಪೊಲೀಸರಿಗೆ ತಲುಪುತ್ತದೆ. ಇ– ಮೇಲ್ನಲ್ಲಿ ಫೋಟೊ, ವಿಡಿಯೊ, ವಾಹನದ ನಂಬರ್ ಪ್ಲೇಟ್, ಜಿಪಿಎಸ್ ಲೊಕೇಶನ್ ಕೂಡ ಸೇರಿಸುತ್ತದೆ.

‘ಪೊಲೀಸ್ ಕಮಿಷನರ್ ಅವರು ನನ್ನನ್ನು ಸಂಪರ್ಕಿಸಿದ್ದು, ಸಭೆ ನಡೆಸುವುದಾಗಿ ಹೇಳಿದ್ದಾರೆ’ ಎಂದು ಪಂಕಜ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.