ಪಟ್ನಾ: ಗಣಿತದ ಶಿಕ್ಷಕಿ ರೂಬಿ ಕುಮಾರಿ ಎನ್ನುವವರು ಮಕ್ಕಳಿಗೆ ವಿನೂತನ ರೀತಿಯಲ್ಲಿ ಮಗ್ಗಿ ಕಲಿಸಿಕೊಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉದ್ಯಮಿ ಆನಂದ್ ಮಹೀಂದ್ರಾ, ಬಾಲಿವುಡ್ ನಟ ಶಾರುಖ್‌ಖಾನ್ ಸೇರಿದಂತೆ ಸಾಕಷ್ಟು ಜನರು ಇದನ್ನು ಲೈಕ್ ಮಾಡಿದ್ದಾರೆ.

ಮೊದಲಿಗೆ ಬಿಹಾರ ಶೈಕ್ಷಣಿಕ ಯೋಜನಾ ಮಂಡಳಿಯ (ಬಿಇಪಿಸಿ) ‘ಟೀಚರ್ಸ್ ಆಫ್ ಬಿಹಾರ್’ ಫೇಸ್‌ಬುಕ್ ಪುಟದಲ್ಲಿ ಈ ವಿಡಿಯೊ ಪೋಸ್ಟ್ ಮಾಡಲಾಗಿತ್ತು. ಬಳಿಕ ಇದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ.

‘ಏನು? ಈ ಜಾಣತನದ ವಿಧಾನ ನನಗೆ ತಿಳಿದಿರಲಿಲ್ಲ. ಅವರು ನನ್ನ ಶಿಕ್ಷಕಿಯಾಗಿದ್ದರೆ ಗಣಿತದಲ್ಲಿ ನಾನು ಮತ್ತಷ್ಟು ಜಾಣನಾಗಿರುತ್ತದೆ ಎನಿಸುತ್ತದೆ’ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ 42 ಸಾವಿರ ಲೈಕ್‌ಗಳು ಬಂದಿವೆ. 11.7 ಲಕ್ಷ ಜನರು ಇದನ್ನು ರಿಟ್ವೀಟ್ ಮಾಡಿದ್ದಾರೆ.

ಹತ್ತು ಕೈಬೆರಳುಗಳನ್ನು ಬಳಸಿಕೊಂಡು ಒಂಬತ್ತರ ಮಗ್ಗಿ ಹೇಳಿಕೊಡುವ ರೂಬಿ ಅವರ ವಿಡಿಯೊಗೆ ಶಾರುಖ್ ಟ್ವೀಟ್ ಮಾಡಿದ್ದು, ‘ನನ್ನ ಜೀವನದ ಎಷ್ಟು ಸಮಸ್ಯೆಗಳನ್ನು ಈ ಸರಳ ಲೆಕ್ಕಾಚಾರ ಪರಿಹರಿಸಿದೆ ಎಂದು ಹೇಳಲು ಅಸಾಧ್ಯ. ಈ ವಿಧಾನವನ್ನು ತಮ್ಮ ಶಿಕ್ಷಣ ವಿಧಾನದಲ್ಲಿ ಅಳವಡಿಸಿಕೊಳ್ಳಿ ಎಂದು ಬೈಜುಗೆ ಇದನ್ನು ಕಳುಹಿಸುತ್ತಿದ್ದೇನೆ’ ಎಂದಿದ್ದಾರೆ.

3.5 ಲಕ್ಷಕ್ಕೂ ಹೆಚ್ಚು ಜನರು ವಿಡಿಯೊ ವೀಕ್ಷಿಸಿದ್ದು, 1.5 ಲಕ್ಷ ಬಾರಿ ಶೇರ್ ಆಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.