ಗುರುವಾರ , ಜುಲೈ 29, 2021
23 °C

ಯಾಕೆ ಹೀಗೆ ಮಾಡಿದಿರಿ: ಸುಶಾಂತ್‌ ಸಿಂಗ್ ರಜಪೂತ್ ಆತ್ಮಹತ್ಯೆಗೆ ಅಭಿಮಾನಿಗಳ ಕಂಬನಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

sushant singh rajput

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನೆಚ್ಚಿನ ನಟನ ಆತ್ಮಹತ್ಯೆ ಸುದ್ದಿ ಕೇಳಿ ಸಾವಿರಾರು ಮಂದಿ ಆಘಾತ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

#SushantSinghRajput ಮತ್ತು #MSDhoni ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಅನೇಕರು ‘ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದಲ್ಲಿನ ಚಿತ್ರ, ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಅವರು ಕ್ರಿಕೆಟಿಗ ಎಂ.ಎಸ್.ಧೋನಿ ಜತೆಗಿರುವ ಚಿತ್ರಗಳನ್ನೂ ಅನೇಕರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

‘ತೀವ್ರ ಆಘಾತವಾಗಿದೆ. ಭಾರಿ ಅನ್ಯಾಯ’ ಎಂದು ಎಂ.ಎಸ್.ಧೋನಿ ನಾಯಕರಾಗಿರುವ ಐಪಿಎಲ್ ತಂಡ ‘ಚೆನ್ನೈ ಸೂಪರ್‌ಕಿಂಗ್ಸ್‌’ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಜತೆಗೆ ‘ಯಾಕೆ ಹೀಗೆ ಮಾಡಿದಿರಿ’ ಎಂದು ಎಂ.ಎಸ್.ಧೋನಿ ಅಭಿಮಾನಿಗಳ ಖಾತೆಯಿಂದ ಟ್ವೀಟ್ ಮಾಡಲಾಗಿದೆ

ಇದನ್ನೂ ಓದಿ: 

‘ಆಘಾತಕಾರಿ ಸುದ್ದಿ. ಈ ದುರಂತದ ಸುದ್ದಿ ನಿಜಕ್ಕೂ ಜೀರ್ಣಿಸಿಕೊಳ್ಳಲಾಗದ್ದು. ನಿಮ್ಮ ಪಯಣ ಇನ್ನೂ ಆರಂಭವಾಗಿತ್ತಷ್ಟೇ, ಪೂರ್ಣಗೊಳ್ಳುವುದಕ್ಕೆ ಇನ್ನೂ ಬಹುದೂರವಿತ್ತು. ಕಂಬಿನಿತುಂಬಿದ ಮತ್ತು ಭಾರವಾದ ಹೃದಯದೊಂದಿಗೆ ನಿಮಗೆ ವಿದಾಯ ಹೇಳುತ್ತಿದ್ದೇನೆ. ನಿಮ್ಮ ನಗು ಶಾಶ್ವತ. ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲಿ’ ಎಂದು ಗಾಯಕ ಅದ್ನಾನ್ ಸಾಮಿ ಟ್ವೀಟ್ ಮಾಡಿದ್ದಾರೆ.

‘ಆಘಾತಕರ ಸುದ್ದಿ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಎಂ.ಎಸ್.ಧೋನಿ ಅವರ ಜೀವನಾಧಾರಿತ ಚಿತ್ರದಲ್ಲಿ ನಿಮ್ಮದು ಅದ್ಭುತ ನಟನೆ. ಇಡೀ ಚಿತ್ರೋದ್ಯಮ ಹಾಗೂ ಭಾರತೀಯರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ನವೀನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು