ಶುಕ್ರವಾರ, ಮೇ 27, 2022
28 °C

2021ರಲ್ಲಿ ಭಾರತೀಯರು ಅತಿ ಹೆಚ್ಚು ಟ್ವೀಟಿಸಿದ ಸೆಲೆಬ್ರಿಟಿಯ ಹೆಸರು ಗೊತ್ತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

2021ರ ಕೊನೆಯ ತಿಂಗಳಲ್ಲಿರುವ ನಮಗೆ ಟ್ವಿಟರ್‌ ಇಂಡಿಯಾ ಕೆಲ ಕುತೂಹಲಕರ ಮಾಹಿತಿಗಳನ್ನು ನೀಡಿದೆ. 

ಈ ವರ್ಷದಾದ್ಯಂತ ಟ್ವಿಟರ್‌ನಲ್ಲಿ ಅತಿ ಹೆಚ್ಚು ಕಾಣಿಸಿಕೊಂಡ ತಾರೆಯರ ಹೆಸರುಗಳನ್ನು ಹೊಂದಿರುವ ಪಟ್ಟಿಯನ್ನು ಟ್ವಿಟರ್‌ ಇಂಡಿಯಾ ಬಿಡುಗಡೆ ಮಾಡಿದೆ. 
 
ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಬಡವರ ಸಹಾಯಕ್ಕೆ ನಿಂತ ಬಹುಭಾಷಾ ನಟ ಸೋನು ಸೂದ್ ಅವರ ಹೆಸರು ಟ್ವಿಟರ್‌ನಲ್ಲಿ ಹೆಚ್ಚು ಕಾಣಿಸಿಕೊಂಡಿದೆ. 

ಆರ್‌ಆರ್‌ಆರ್‌ ನಟಿ ಆಲಿಯಾ ಭಟ್‌ ಅವರ ಹೆಸರು ಮಹಿಳಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 

ಹೆಚ್ಚು ಟ್ವೀಟ್ ಮಾಡಲಾಗಿರುವ ಬಾಲಿವುಡ್ ನಟರ ಪಟ್ಟಿ ಇಲ್ಲಿದೆ 

* ಸೋನು ಸೂದ್

* ಅಕ್ಷಯ್ ಕುಮಾರ್

* ಸಲ್ಮಾನ್ ಖಾನ್

* ಶಾರುಖ್ ಖಾನ್

* ಅಮಿತಾಭ್‌ ಬಚ್ಚನ್

ಸಾಂಕ್ರಾಮಿಕದ ನಡುವೆ ನಟ ಸೋನು ಸೂದ್ ಅವರು ಸಮಾಜ ಸೇವೆ ಮಾಡುವ ಮೂಲಕ ಪ್ರಶಂಸೆ ಗಳಿಸಿದರು. ಇದು ದೇಶದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸಿತು. ಜನರು ಅವರಿಗೆ ಟ್ವಿಟರ್‌ ಮೂಲಕ ಕೃತಜ್ಞತೆ ಸಲ್ಲಿಸಿದರು. 

ಹೆಚ್ಚು ಟ್ವೀಟ್ ಮಾಡಲಾಗಿರುವ ಬಾಲಿವುಡ್ ನಟಿಯರ ಪಟ್ಟಿ ಇಲ್ಲಿದೆ 

* ಆಲಿಯಾ ಭಟ್

* ಪ್ರಿಯಾಂಕಾ ಚೋಪ್ರಾ

* ದಿಶಾ ಪಟಾನಿ

* ದೀಪಿಕಾ ಪಡುಕೋಣೆ

* ಅನುಷ್ಕಾ ಶರ್ಮಾ

ಬಿಗ್‌ ಬಜೆಟ್‌ ಚಿತ್ರಗಳಾದ ಆರ್‌ಆರ್‌ಆರ್‌ ಮತ್ತು ಗಂಗೂಬಾಯಿ ಕಥಿಯಾವಾಡಿಗಳಲ್ಲಿ ಆಲಿಯಾ ಭಟ್‌ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆ ಕಾರಣ, ಪ್ರೇಕ್ಷಕರು ಆಲಿಯಾ ಭಟ್‌ ಅವರನ್ನು ಟ್ವಿಟರ್‌ನಲ್ಲಿ ಹೆಚ್ಚು ನೆನೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು