ಮಂಗಳವಾರ, ಮೇ 24, 2022
21 °C

ಸ್ವದೇಶಿ 'ಕೂ' ಕಡೆಗೆ ಇಡೀ ಕೇಂದ್ರ ಸರ್ಕಾರ?

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ದೆಹಲಿ: ಸಾಮಾಜಿಕ ತಾಣ ಟ್ವಿಟರ್‌ನೊಂದಿಗಿನ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇನ್ನು ಮುಂದೆ ಸಾರ್ವಜನಿಕ ಪ್ರಕಟಣೆಗಳಿಗಾಗಿ ಸ್ವದೇಶಿ ಆಪ್‌ 'ಕೂ' ಅನ್ನು ಸಂವಹನ ಮಾಧ್ಯಮವನ್ನಾಗಿ ಪರಿಗಣಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಇದರ ಜೊತೆಗೇ, ಎಲ್ಲ ಕೇಂದ್ರ ಮಂತ್ರಿಗಳು ಅವರಿಗೆ ಸಂಬಂಧಿಸಿದ ಇಲಾಖೆಗಳು ಆದಷ್ಟು ಶೀಘ್ರವೇ ಕೂ ಉಪಯೋಗಿಸಬೇಕು ಎಂದು ಸೂಚನೆಯನ್ನೂ ನೀಡಲಾಗಿದೆ. ಸಾಮಾಜಿಕ ತಾಣದ ವಿಚಾರದಲ್ಲಿಯೂ ಆತ್ಮನಿರ್ಭರತೆ ಸಾಧಿಸಲು ನಿರ್ಧರಿಸಿರುವ ಸರ್ಕಾರ, ಯಾವುದೇ ಪ್ರಕಟಣೆಯನ್ನು ಮೊದಲಿಗೆ ಕೂನಲ್ಲಿ ಹಂಚಿಕೊಳ್ಳಲಿದೆ. ಇದಾದ ಒಂದರಿಂದ ಮೂರು ಗಂಟೆಗಳ ನಂತರ ಟ್ವಿಟರ್‌ ಸೇರಿದಂತೆ ಇತರ ಸಾಮಾಜಿಕ ತಾಣಗಳ ವೇದಿಕೆಯಲ್ಲಿ ಹಂಚಿಕೊಳ್ಳಲಿದೆ ಎಂದು 'ಎಕನಾಮಿಕ್‌ ಟೈಮ್ಸ್‌' ವರದಿ ಮಾಡಿದೆ.

ಈ ವರೆಗೆ 30 ಲಕ್ಷ ಮಂದಿ ಕೂ ಆಪ್‌ ಅನ್ನು ತಮ್ಮ ಮೊಬೈಲ್‌ಗಳಲ್ಲಿ ಅನುಸ್ಥಾಪನೆ ಮಾಡಿಕೊಂಡಿದ್ದಾರೆ. ಕೂಗೆ ಭಾರತದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಶೀಘ್ರದಲ್ಲೇ ಪ್ರಧಾನಿ ಮೋದಿ ಅವರೂ ಈ ವೇದಿಕೆ ಸೇರುವ ನಿರೀಕ್ಷೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು