ನವದೆಹಲಿ: ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಭಾರತೀಯ ಸೇನೆಯ ಶ್ರೀನಗರ ಮೂಲದ 'ಚಿನಾರ್ ಕೋರ್'ನ ಇನ್ಸ್ಟಾಗ್ರಾಮ್ ಖಾತೆ ಬುಧವಾರ ಸಕ್ರಿಯಗೊಂಡಿದೆ.

ಯಾವುದೇ ಕಾರಣ ಸೂಚಿಸದೆ ಹತ್ತಕ್ಕೂ ಹೆಚ್ಚು ದಿನಗಳಿಂದ ಚಿನಾರ್ ಕೋರ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆ ಸ್ಥಗಿತಗೊಂಡಿತ್ತು.

ಕಾಶ್ಮೀರ ಕಣಿವೆಯಲ್ಲಿನ ವಾಸ್ತವ ಸ್ಥಿತಿ, ಗಡಿ ಭಾಗಗಳ ಪರಿಸ್ಥಿತಿಯ ಕುರಿತು ಹರಡುವ ಸುಳ್ಳು ವಿಷಯಗಳು ಹಾಗೂ ಅಪಪ್ರಚಾರಗಳ ಮೇಲೆ ನಿಗಾವಹಿಸಿ ಸ್ಪಷ್ಟನೆ ನೀಡುವ ಮತ್ತು ಅಧಿಕೃತ ಹೇಳಿಕೆ ಪ್ರಕಟಿಸಲು 'ಚಿನಾರ್ ಕೋರ್' ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಲಾಗುತ್ತಿದೆ.

ಚಿನಾರ್ ಕೋರ್ ಫೇಸ್ಬುಕ್ ಖಾತೆಗೆ 24,399 ಫಾಲೋವರ್ಸ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯನ್ನು 43,410 ಜನರು ಹಿಂಬಾಲಿಸುತ್ತಿದ್ದಾರೆ.

ಉಗ್ರರ ನಿಗ್ರಹ ಕಾರ್ಯಾಚರಣೆ ಸೇರಿದಂತೆ ಸೇನೆಯ ಇತರೆ ಚಟುವಟಿಗೆಗಳ ಕುರಿತು ಈ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಯಾವುದೇ ಪೋಸ್ಟ್ ಅಥವಾ ಹಂಚಿಕೊಳ್ಳಲಾಗಿರುವ ವಿಷಯಗಳ ಕುರಿತು ಸಾಮೂಹಿಕವಾಗಿ ನೆಟ್ಟಿಗರು ಸಾಮಾಜಿಕ ಮಾಧ್ಯಮ ಸಂಸ್ಥೆಗೆ ರಿಪೋರ್ಟ್ ಮಾಡಿದ್ದರೆ, ಖಾತೆಗೆ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ.

ಗಣರಾಜ್ಯೋತ್ಸವ ದಿನದ ಸಂಭ್ರಮಾಚರಣೆಯ ಕುರಿತು ಹಲವು ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಳ್ಳಲಾಗಿತ್ತು. ಅವುಗಳನ್ನು ವಿರೋಧಿ ರಾಷ್ಟ್ರದ ಸಾಮಾಜಿಕ ಖಾತೆದಾರರು ರಿಪೋರ್ಟ್ ಮಾಡಿರುವ ಸಾಧ್ಯತೆ ಇರುವುದಾಗಿ ವಿಶ್ಲೇಷಿಸಲಾಗಿದೆ.

ಆದರೆ, ಖಾತೆ ಸ್ಥಗಿತಗೊಂಡಿದ್ದರ ಕುರಿತು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನ ಮೂಲ ಸಂಸ್ಥೆ 'ಮೆಟಾ'ದಿಂದ ಭಾರತೀಯ ಸೇನೆಗೆ ವಿವರಣೆ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.