ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Clubhouse: ಆಹ್ವಾನ ಬೇಕಿಲ್ಲ, ಈಗ ಎಲ್ಲರಿಗೂ ಮುಕ್ತ ಪ್ರವೇಶ

ಅಕ್ಷರ ಗಾತ್ರ

ಬೆಂಗಳೂರು: ಆಡಿಯೊ ಸಂವಹನ ಜಾಲತಾಣ ಕ್ಲಬ್‌ಹೌಸ್ ಈಗ ಎಲ್ಲರಿಗೂ ಮುಕ್ತ ಪ್ರವೇಶಾವಕಾಶ ಕಲ್ಪಿಸುತ್ತಿದೆ.

ಆಹ್ವಾನಿತರಿಗೆ ಮಾತ್ರ ಎನ್ನುವ ಆಯ್ಕೆಯನ್ನು ಕ್ಲಬ್‌ಹೌಸ್ ರದ್ದುಪಡಿಸಿದೆ. ಫೇಸ್‌ಬುಕ್ ಹೊಸದಾಗಿ ಪರಿಚಯಿಸುತ್ತಿರುವ ಆಡಿಯೊ ರೂಮ್ ಮತ್ತು ಟ್ವಿಟರ್ ಸ್ಪೇಸಸ್ ಜತೆಗೆ ಸ್ಪರ್ಧೆಗೆ ಇಳಿದಿರುವ ಕ್ಲಬ್‌ಹೌಸ್, ಈಗ ಆಹ್ವಾನ ಇಲ್ಲದೆಯೇ ಬಳಕೆದಾರರು ಆ್ಯಪ್ ಸೇರಿಕೊಳ್ಳಬಹುದು ಎಂಬ ಅಪ್‌ಡೇಟ್ ಬಿಡುಗಡೆ ಮಾಡಿದೆ.

ಕ್ಲಬ್‌ಹೌಸ್ ಸ್ಥಾಪಕರಾದ ಪಾಲ್ ಡೇವಿಡ್ಸನ್ ಮತ್ತು ರೋಹನ್ ಸೇಠ್, ನೂತನ ಅಪ್‌ಡೇಟ್ ಬಗ್ಗೆ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ.

ಐಓಎಸ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ನೂತನ ವೈಶಿಷ್ಟ್ಯ ಲಭ್ಯವಾಗುತ್ತಿದೆ. ಹೊಸ ಅಪ್‌ಡೇಟ್ ಮೂಲಕ, ಯಾವುದೇ ಆಹ್ವಾನ ಇಲ್ಲದೆಯೇ ಕ್ಲಬ್‌ಹೌಸ್ ಆ್ಯಪ್‌ನಲ್ಲಿ ಖಾತೆ ತೆರೆಯಲು ಅವಕಾಶವಿದೆ.

ಮೇ ತಿಂಗಳಿನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾದ ಬಳಿಕ ಕ್ಲಬ್‌ಹೌಸ್ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT