ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಸರ್‌ಪ್ರೈಸ್‌ ನೀಡ್ತಾರಾ ಡ್ರೋನ್ ಪ್ರತಾಪ್? ಕುತೂಹಲ ಮೂಡಿಸಿದ ಹೊಸ ಫೋಟೊ

Last Updated 2 ನವೆಂಬರ್ 2022, 11:24 IST
ಅಕ್ಷರ ಗಾತ್ರ

ಬೆಂಗಳೂರು: ಡ್ರೋನ್ ವಿಚಾರದಲ್ಲಿ ಸಾಕಷ್ಟು ಸುದ್ದಿ, ಟ್ರೋಲ್ ಆಗಿದ್ದ ಮಂಡ್ಯದ ಮಳವಳ್ಳಿ ಮೂಲದ ಡ್ರೋನ್ ಪ್ರತಾಪ್ ಅವರು (ಪ್ರತಾಪ್ ಎನ್‌ಎಂ) ಕಳೆದ ಕೆಲದಿನಗಳಿಂದ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.

ಇದೀಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟ್‌ ಒಂದನ್ನು ಹಾಕುವ ಮೂಲಕ ಅವರು ಕುತೂಹಲ ಮೂಡಿಸಿದ್ದಾರೆ.

ಪ್ರತಾಪ್ ಈ ಬಾರಿ ಹೊಸದಾಗಿ ಏನೋ ಒಂದನ್ನು ಪ್ರಾರಂಭಿಸುತ್ತಿರುವಂತೆ ಮುನ್ಸೂಚನೆ ನೀಡಿದ್ದಾರೆ. ಕೈಗೆ ದೊಡ್ಡ ಹಳದಿ ಗ್ಲೌಸ್ ಕಟ್ಟಿಕೊಂಡು ಟೇಬಲ್ ಮೇಲೊಂದು ಲ್ಯಾಪ್‌ಟಾಪ್‌ಇಟ್ಟು, ಅದಕ್ಕೆ ಡಾಟಾ ಕೇಬಲ್ ಅಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡಿದ್ದಾರೆ. ಕಣ್ಣಿಗೆ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಮಷಿನ್ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಈ ಮೂಲಕ ತಾನುಏನು ಕೆಲಸ ಮಾಡುತ್ತಿದ್ದೇನೆ ಎಂಬುದರ ಗುಟ್ಟನ್ನು ಬಿಟ್ಟು ಕೊಡದ ಪ್ರತಾಪ್ ಈ ಫೋಟೊಗೆ 'ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ಶುರುವಾಗಲು ಪ್ರಾರಂಭಿಸುತ್ತವೆ' ಎಂಬ ವಕ್ಕಣಿಕೆ ಬರದಿದ್ದಾರೆ.

ಆದರೆ, ಪ್ರತಾಪ್ ಅವರ ಈ ಪೋಸ್ಟ್‌ ಬಗ್ಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು ತಹರೆವಾರಿ ಕಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಅವರ ಈ ಪೋಸ್ಟ್ ಸಖತ್ ಚರ್ಚೆಯಾಗುತ್ತಿದೆ.

ಕೆಲ ತಿಂಗಳುಗಳ ಹಿಂದೆ‘ಡ್ರೋನ್‌ ವಿಜ್ಞಾನಿ’ ಎಂದು ಪ್ರಚಾರ ಪಡೆದಿದ್ದ ಎಂ.ಎನ್‌.ಪ್ರತಾಪ್‌ ಅವರ ಸಾಧನೆಗಳ ವಿಶ್ವಾಸಾರ್ಹತೆ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು.

ಪ್ರತಾಪ್‌ ಅಭಿವೃದ್ಧಿಪಡಿಸಿದರೆನ್ನಲಾದ ಡ್ರೋನ್‌ಗಳ‌ ಕುರಿತಂತೆ, ವಿಜ್ಞಾನ ಸಮಾವೇಶಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಬಗ್ಗೆ ವೆಬ್‌ಸೈಟ್‌ವೊಂದು ಫ್ಯಾಕ್ಟ್‌ ಚೆಕ್‌ಪ್ರಕಟಿಸಿತ್ತು. ಡ್ರೋನ್‌ ಪ್ರತಾಪ್‌ ಹೇಳುತ್ತಿರುವಂತೆ ಅವರು ಸಾಧನೆಗಳನ್ನು ಮಾಡಿಲ್ಲ ಎಂದು ಅದು ವರದಿ ಮಾಡಿತ್ತು. ಈ ವರದಿ ಪ್ರಕಟವಾಗುತ್ತಲೇ ಪ್ರತಾಪ್‌ ಕುರಿತಂತೆ ರಾಜ್ಯದಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಾಪ್‌ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಈ ಸಂಗತಿ ಸಾಕಷ್ಟು ಜನರಿಗೆ ಆಶ್ಚರ್ಯ ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT