ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಹ್ಯಾಕ್: 20 ಕೋಟಿಗೂ ಅಧಿಕ ಬಳಕೆದಾರರ ಇ-ಮೇಲ್ ಸೋರಿಕೆ

ಭದ್ರತಾ ಸಂಶೋಧಕರಿಂದ ವರದಿ
Last Updated 6 ಜನವರಿ 2023, 3:16 IST
ಅಕ್ಷರ ಗಾತ್ರ

ಲಂಡನ್: ಟ್ವಿಟರ್‌ ಅನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್, 20 ಕೋಟಿಗೂ ಅಧಿಕ ಬಳಕೆದಾರರ ಇ-ಮೇಲ್ ವಿವರ ಸೋರಿಕೆ ಮಾಡಿದ್ದಾರೆ.

ಇಸ್ರೇಲ್ ಮೂಲದ ಸೈಬರ್‌ ಸೆಕ್ಯುರಿಟಿ ಸಂಸ್ಥೆ ಹಡ್ಸನ್‌ ರಾಕ್‌ನ ಅಲನ್ ಗಾಲ್ ಈ ಕುರಿತು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೋರಿಕೆಯಾದ ಇ-ಮೇಲ್ ಐಡಿಗಳನ್ನು ಹ್ಯಾಕರ್ಸ್ ಆನ್‌ಲೈನ್ ಹ್ಯಾಕಿಂಗ್ ಫೋರಂನಲ್ಲಿ ಪ್ರಕಟಿಸಿದ್ದಾರೆ ಎಂದು ಅಲನ್ ಹೇಳಿದ್ದಾರೆ.

ಬಳಕೆದಾರರ ಇ-ಮೇಲ್ ಐಡಿ ಸೋರಿಕೆ ಕುರಿತು ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ಈ ಕುರಿತು ಯಾವ ಕ್ರಮ ಕೈಗೊಂಡಿದ್ದೇವೆ ಎಂದು ಕೂಡ ಪ್ರಕಟಿಸಿಲ್ಲ.

ಟ್ವಿಟರ್ ಬಳಕೆದಾರರ ಇ-ಮೇಲ್ ಐಡಿ ಸೋರಿಕೆ ಕುರಿತು ಹಲವು ಸ್ಕ್ರೀನ್‌ಶಾಟ್‌ಗಳು ಹ್ಯಾಕರ್ಸ್ ಫೋರಂನಲ್ಲಿ ಹರಿದಾಡಿವೆ.

ಬಳಕೆದಾರರ ವಿವರ ಸೋರಿಕೆ ಮಾಡಿದ ಹ್ಯಾಕರ್ಸ್ ಯಾರು ಎನ್ನುವುದು ಬಹಿರಂಗವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT