ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾನ್‌ ಮಸ್ಕ್‌ರನ್ನು ಟೀಕೆ ಮಾಡಿ ಕೆಲಸ ಕಳೆದುಕೊಂಡ 20 ಮಂದಿ ಟ್ವಿಟರ್ ನೌಕರರು

Last Updated 16 ನವೆಂಬರ್ 2022, 5:21 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ವಿರುದ್ಧ ಟೀಕೆ ಮಾಡಿದ ಕನಿಷ್ಠ 20 ಮಂದಿ ಉದ್ಯೋ‌ಗಿಗಳನ್ನು ಟ್ವಿಟರ್‌ ಮಾಲೀಕ ಇಲಾನ್‌ ಮಸ್ಕ್‌ ಕೆಲಸದಿಂದ ವಜಾ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಅಥವಾ ಕಂಪನಿಯ ಆಂತರಿಕ ಸಂವಹನ ಮಾಧ್ಯಮದ‌ಲ್ಲಿ ಇಲಾನ್‌ ಮಸ್ಕ್‌ ಅವರನ್ನು ಟೀಕೆ ಮಾಡಿದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಟ್ವಿಟರ್‌ ಸ್ವಾಧೀನದ ಬಳಿಕ ಸುಮಾರು 3800 ಕಾಯಂ ಉದ್ಯೋಗಿಗಳು ಹಾಗೂ 5,000 ಗುತ್ತಿಗೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಜತೆಗೆ ಉದ್ಯೋಗಿಗಳಿಗೆ ಕಠಿಣ ಷರತ್ತು ವಿಧಿಸಲಾಗಿತ್ತು.

ಟ್ವಿಟರ್‌ನಲ್ಲಿ ಮಸ್ಕ್‌ ಮಾಡಿದ ಬದಲಾವಣೆಗಳ ಬಗ್ಗೆ ಟೀಕೆ ಮಾಡಿದ ಉದ್ಯೋಗಿಗಳನ್ನು ಮಸ್ಕ್‌ ಮನೆಗೆ ಕಳುಹಿಸಿದ್ದಾರೆ.

ಸುಮಾರು 20 ಮಂದಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಹಾಗೂ ಟೆಕ್‌ ಬರಹಗಾರರು ಮಸ್ಕ್‌ ಅವರನ್ನು ಟೀಕೆ ಮಾಡಿ ಕೆಲಸ ಕಳೆದುಕೊಂಡಿದ್ದಾರೆ.

ಟ್ವಿಟರ್‌ನಲ್ಲೇ ಪ್ರಶ್ನಿಸಿ ಕೆಲಸ ಕಳೆದುಕೊಂಡ ಉದ್ಯೋಗಿ

ಟ್ವಿಟರ್‌ನ ಆಂಡ್ರಾಯ್ಡ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎರಿಕ್‌ ಫ್ರೋನ್‌ಹೋಪರ್‌ ಎಂಬ ಎಂಜಿನಿಯರ್, ಮಸ್ಕ್‌ ಅವರ ಹಳೇಯ ಟ್ವೀಟ್‌ ಅನ್ನು ಮೆನ್ಷನ್‌ ಮಾಡಿ, ‘ಟ್ವಿಟರ್‌ನ ತಾಂತ್ರಿಕತೆ ಬಗ್ಗೆ ಮಸ್ಕ್‌ ಅವರಿಗೆ ಇರುವ ತಿಳಿವಳಿಕೆ ತಪ್ಪು‘ ಎಂದು ಹೇಳಿದ್ದರು.

ಇದಕ್ಕೆ ಉತ್ತರಿಸಿದ್ದ ಮಸ್ಕ್, ‘ಆಂಡ್ರಾಯ್ಡ್‌ನಲ್ಲಿ ಟ್ವಿಟರ್‌ ನಿಧಾನವಾಗಿ ಕೆಲಸ ಮಾಡುತ್ತಿದೆ. ಇದನ್ನು ಸರಿಪಡಿಸಲು ನೀನು ಏನು ಮಾಡಿರುವೆ?‘ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಎರಿಕ್‌ ಫ್ರೋನ್‌ಹೋಪರ್‌ ಉತ್ತರ ನೀಡಿದ್ದಾರೆ. ಈ ನಡುವೆ ಮತ್ತೊಬ್ಬ ಬಳಕೆದಾರ ‘ಈ ವಿಷಯವನ್ನೇಕೆ ನಿಮ್ಮ ಹೊಸ ಬಾಸ್‌ಗೆ ವೈಯಕ್ತಿಕವಾಗಿ ತಿಳಿಸಬಾರದು?‘ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಎರಿಕ್‌ ಫ್ರೋನ್‌ಹೋಪರ್‌, ‘ಅವರೂ ಕೂಡ ವೈಯಕ್ತಿಕವಾಗಿ ಪ್ರಶ್ನೆ ಕೇಳಬಹುದಿತ್ತು‘ ಎಂದು ಉತ್ತರಿಸಿದ್ದಾರೆ.

ಇದರ ಬೆನ್ನಲ್ಲೇ ಎರಿಕ್‌ ಫ್ರೋನ್‌ಹೋಪರ್‌ ಅವರನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ ಎಂದು ಮಸ್ಕ್‌ ಬರೆದುಕೊಂಡಿದ್ದಾರೆ.

ಎರಿಕ್‌ ಫ್ರೋನ್‌ಹೋಪರ್‌ 8 ವರ್ಷದಿಂದ ಟ್ವಿಟರ್‌ನಲ್ಲಿ ಉದ್ಯೋಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT