ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಟ್ವಿಟರ್ ಸ್ವಲ್ಪ ನಿಧಾನ: ಇಲಾನ್ ಮಸ್ಕ್

ಟ್ವಿಟರ್ ಆ್ಯಪ್ ಕಾರ್ಯನಿರ್ವಹಿಸುವುದು ನಿಧಾನವಾಗಿದೆ-ಇಲಾನ್ ಮಸ್ಕ್
Last Updated 16 ನವೆಂಬರ್ 2022, 4:02 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಭಾರತ ಮತ್ತು ಇಂಡೋನೇಷ್ಯಾ ಹಾಗೂ ಕೆಲವೊಂದು ರಾಷ್ಟ್ರಗಳಲ್ಲಿ ಟ್ವಿಟರ್ ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿದೆ ಎಂದು ಕಂಪನಿ ಮುಖ್ಯಸ್ಥ ಇಲಾನ್ ಮಸ್ಕ್ ಹೇಳಿದ್ದಾರೆ.

ಟ್ವಿಟರ್ ಅನ್ನು ಖರೀದಿಸಿದ ಬಳಿಕ ಇಲಾನ್ ಮಸ್ಕ್ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ.

ಭಾರತದಲ್ಲಿ ಟ್ವಿಟರ್ ಸ್ವಲ್ಪ ಸ್ಲೋ ಇದೆ, ಅದಕ್ಕೆ ಇಂಟರ್‌ನೆಟ್ ಸಮಸ್ಯೆ ಕಾರಣವಾಗಿರಬಹುದು ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಜತೆಗೆ, ಮತ್ತೊಂದು ಟ್ವೀಟ್ ಮಾಡಿರುವ ಇಲಾನ್ ಮಸ್ಕ್, ಟ್ವಿಟರ್ ನಿಮ್ಮಲ್ಲಿ ನಿಧಾನವಾಗಿ ಕೆಲಸ ಮಾಡುತ್ತಿದ್ದರೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ.

ಆಯಾ ದೇಶಗಳ ಇಂಟರ್‌ನೆಟ್ ವೇಗ, ಸಂಪರ್ಕ ವ್ಯವಸ್ಥೆ ಮತ್ತು ದತ್ತಾಂಶ ವರ್ಗಾವಣೆಗೆ ಅನುಗುಣವಾಗಿ ಟ್ವಿಟರ್ ಕೆಲಸ ಮಾಡುತ್ತದೆ. ಆದರೆ ಭಾರತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದುಕೊಂಡಿಲ್ಲ ಎನ್ನುವುದು ಮಸ್ಕ್ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT