ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ವಿಶ್ವದ ನಂ1 ಶ್ರೀಮಂತನ ಪಟ್ಟ ಗಿಟ್ಟಿಸಿದ ಎಲಾನ್ ಮಸ್ಕ್

Last Updated 28 ಫೆಬ್ರುವರಿ 2023, 5:54 IST
ಅಕ್ಷರ ಗಾತ್ರ

ನವದೆಹಲಿ: ಟೆಸ್ಲಾ ಮತ್ತು ಟ್ವಿಟರ್ ಸಿಇಒ ಎಲಾನ್ ಮಸ್ಕ್ ಮತ್ತೆ ವಿಶ್ವದ ನಂ 1 ಶ್ರೀಮಂತನ ಪಟ್ಟ ಗಿಟ್ಟಿಸಿದ್ದಾರೆ ಎಂದು ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್ ಸೂಚ್ಯಂಕ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಫ್ರೆಂಚ್ ಐಷಾರಾಮಿ ಬ್ರಾಂಡ್ 'ಲೂಯಿ ವಿಟಾನ್' ಸಿಇಒ ಬರ್ನಾರ್ಡ್ ಆರ್ನಾಲ್ಟ್ ಅವರು, ಮಸ್ಕ್ ಅವರನ್ನು ಹಿಂದಿಕ್ಕಿದ್ದರು.

ಎರಡು ತಿಂಗಳ ಕಾಲ ಎರಡನೇ ಸ್ಥಾನದಲ್ಲಿದ್ದ ಮಸ್ಕ್ ಅವರನ್ನು ಟೆಸ್ಲಾ ಷೇರುಗಳ ಮೌಲ್ಯ ಹೆಚ್ಚಳವು ಮತ್ತೆ ಅಗ್ರಸ್ಥಾನಕ್ಕೆ ತಂದು ಕೂರಿಸಿದೆ.

ಸೋಮವಾರ ಷೇರು ಪೇಟೆ ಮುಕ್ತಾಯದ ಬಳಿಕ ಎಲಾನ್ ಮಸ್ಕ್ ಸಂಪತ್ತಿನ ಮೌಲ್ಯ 187.1 ಬಿಲಿಯನ್ ಡಾಲರ್ ಆಗಿದ್ದು, 185.3 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ಆರ್ನಾಲ್ಟ್‌ ಅವರನ್ನು ಹಿಂದಿಕ್ಕಿದ್ದಾರೆ.

ಈ ವರ್ಷ ಟೆಸ್ಲಾ ಷೇರುಗಳ ಮೌಲ್ಯ ಶೇ.70ರಷ್ಟು ಹೆಚ್ಚಿರುವುದು ಮಸ್ಕ್ ಸಂಪತ್ತು ವೃದ್ಧಿಗೆ ಕಾರಣ ಎಂದು ವರದಿ ತಿಳಿಸಿದೆ.

ಹಾಗೆ ನೋಡಿದರೆ, ಟೆಸ್ಲಾ ಮುಖ್ಯಸ್ಥನ ನಿವ್ವಳ ಸಂಪತ್ತಿನ ಮೌಲ್ಯವು ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ನಡುವೆ 200 ಶತಕೋಟಿ ಡಾಲರ್‌ಗಿಂತ ಕಡಿಮೆಯಾಗಿದೆ. ಇದು ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ದೊಡ್ಡ ಕುಸಿತವಾಗಿದೆ.

ಆ ಸಮಯದಲ್ಲಿ ಟೆಸ್ಲಾ ಷೇರುಗಳ ಮೌಲ್ಯದಲ್ಲಿ ತ್ವರಿತ ಕುಸಿತವು ಮಸ್ಕ್ ಸಂಪತ್ತಿನ ನಷ್ಟಕ್ಕೆ ಕಾರಣವಾಗಿತ್ತು. ಕಳೆದ ವರ್ಷವು ವಾಲ್ ಸ್ಟ್ರೀಟ್‌ನಲ್ಲಿ ಮಸ್ಕ್‌ಗ ಅತ್ಯಂತ ಕೆಟ್ಟ ವರ್ಷವಾಗಿತ್ತು, ಕೋವಿಡ್ -19 ಪರಿಣಾಮಗಳ ಹಿನ್ನೆಲೆ ಹೂಡಿಕೆದಾರರ ಆತಂಕ ಮತ್ತು ಟ್ವಿಟರ್‌ ಅನ್ನು ವಿವಾದಾತ್ಮಕ ರೀತಿಯಲ್ಲಿ ಸ್ವಾಧೀನಪಡಿಸಿಕೊಂಡ ವಿಷಯಗಳಿಂದಾಗಿ ಮಸ್ಕ್ ಭಾರಿ ನಷ್ಟ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT