ಶುಕ್ರವಾರ, ಫೆಬ್ರವರಿ 28, 2020
19 °C

ಗ್ರಾಹಕರನ್ನು ನೇರವಾಗಿ ತಲುಪುವ ಉದ್ದೇಶ; ಫೇಸ್‌ಬುಕ್‌ ಇಂಡಿಯಾಗೆ ಅವಿನಾಶ್ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ಫೇಸ್‌ಬುಕ್‌

ನವದೆಹಲಿ: ಫೇಸ್‌ಬುಕ್‌ ಭಾರತದಲ್ಲಿನ ಕಾರ್ಯಾಚರಣೆಗಳ ಮಾರ್ಕೆಟಿಂಗ್‌ ನಿರ್ದೇಶಕರಾಗಿ ಅವಿನಾಶ್‌ ಪಂತ್‌ ಅವರನ್ನು ನೇಮಕ ಮಾಡಿರುವುದಾಗಿ ಶುಕ್ರವಾರ ತಿಳಿಸಿದೆ.

ಫೇಸ್‌ಬುಕ್‌ ಇಂಡಿಯಾ ಪಾಲಿಗೆ ಮಾರ್ಕೆಟಿಂಗ್‌ ಡೈರೆಕ್ಟರ್‌ ಹುದ್ದೆಯ ಪಾತ್ರ ಹೊಸತಾಗಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ನ ಬಳಕೆದಾರರನ್ನು (ಗ್ರಾಹಕರನ್ನು) ತಲುಪಬಹುದಾದ ಹೊಣೆಯನ್ನು ಅವಿನಾಶ್ ವಹಿಸಲಾಗಿದ್ದಾರೆ. ಐಐಎಂ–ಅಹಮದಾಬಾದ್‌ನಲ್ಲಿ ವ್ಯಾಸಂಗ ಮಾಡಿರುವ ಅವರು ನೈಕಿ, ಕೊಕಾ–ಕೋಲಾ, ದಿ ವಾಲ್ಟ್‌ ಡಿಸ್ನಿ ಕಂಪನಿ ಹಾಗೂ ರೆಡ್‌ ಬುಲ್‌ ಬ್ರ್ಯಾಂಡ್‌ಗಳಲ್ಲಿ 22 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ರೆಡ್‌ ಬುಲ್‌ನ ಭಾರತ ವಲಯದ ಮಾರ್ಕೆಟಿಂಗ್‌ ಡೈರೆಕ್ಟರ್‌ ಆಗಿದ್ದ ಅವಿನಾಶ್ ಪಂತ್ ಅವರು ದೇಶದಲ್ಲಿ 'ರೆಡ್‌ ಬುಲ್‌' ಬ್ರ್ಯಾಂಡ್‌ ವಿಸ್ತರಿಸುವ ಜವಾಬ್ದಾರಿ ನಿರ್ವಹಿಸಿದ್ದರು. ಫೇಸ್‌ಬುಕ್‌ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಮೋಹನ್‌ ಅವರಲ್ಲಿ ಕಾರ್ಯಾಚರಣೆ ವರದಿ ಮಾಡಲಿದ್ದಾರೆ. 

ಸಾಮಾಜಿಕ ವಾಣಿಜ್ಯ ವೇದಿಕೆ 'ಮೀಶೊ'ದಲ್ಲಿ ಈಗಾಗಲೇ ಫೇಸ್‌ಬುಕ್‌ ಹೂಡಿಕೆ ಮಾಡಿದ್ದು, ಗ್ರಾಹಕರನ್ನು ನೇರವಾಗಿ ತಲುಪುವ ಉದ್ದೇಶದೊಂದಿಗೆ ಹೊಸ ಯೋಜನೆಗಳನ್ನು ಕೈಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು