ಸಿದ್ದಗಂಗಾ ಶ್ರೀಗಳು ಹೀಗಿದ್ದರು: ನೆಟಿಜನ್‍ಗಳ ನುಡಿನಮನ

7

ಸಿದ್ದಗಂಗಾ ಶ್ರೀಗಳು ಹೀಗಿದ್ದರು: ನೆಟಿಜನ್‍ಗಳ ನುಡಿನಮನ

Published:
Updated:

ಬೆಂಗಳೂರು:  ಸೋಮವಾರ ಅಸ್ತಂಗತರಾದ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಬಗ್ಗೆ ನೆಟಿಜನ್‍ಗಳು ಸಾಮಾಜಿಕ ಮಾಧ್ಯಮಗಳಲ್ಲಿ ನುಡಿ ನಮನ ಸಲ್ಲಿಸಿದ್ದಾರೆ. ಶಿವಕುಮಾರ ಸ್ವಾಮೀಜಿ ಜತೆಗಿನ ಒಡನಾಟ, ಮಠಕ್ಕೆ ಭೇಟಿ ಕೊಟ್ಟಾಗ ಆದ ಅನುಭವಗಳು, ಅವರ ಮೇಲಿನ ಭಕ್ತಿ, ಪ್ರೀತಿ ಆದರಗಳ ಬಗ್ಗೆ  ಫೇಸ್‍ಬುಕ್‍ನಲ್ಲಿ ಕಂಡು ಬಂದ ಕೆಲವೊಂದು ಆಪ್ತ ಬರಹಗಳು ಇಲ್ಲಿವೆ.

ಮುಟ್ಟಾಗಿರುವ ಬಗ್ಗೆ ನಾಚಿಕೆ ಬೇಡ ಎಂದರು

ನನಗೆ ಆಗ 13ರ ಹರೆಯ. ನಮ್ಮ ಶಾಲೆಯಿಂದ ಶಿವಗಂಗೆಗೆ ಪ್ರವಾಸ ಹೋದಾಗ ಊಟಕ್ಕಾಗಿ ಸಿದ್ದಗಂಗಾ ಮಠಕ್ಕೆ ಹೋದೆವು. ನಮ್ಮಲ್ಲಿರುವ ಕೆಲವು ಹೆಣ್ಣುಮಕ್ಕಳನ್ನು ಬೇರೆ ಕಡೆ ಊಟಕ್ಕೆ ಕೂರಿಸಲಾಯಿತು.ಅಷ್ಟೊತ್ತಿಗೆ ಕಾವಿ ಧರಿಸಿದ ಹಿರಿಯ ವ್ಯಕ್ತಿಯೊಬ್ಬರು ತಮ್ಮ ಶಿಷ್ಯರೊಂದಿಗೆ ಬಂದರು. ಅಲ್ಲಿಗೆ ಬಂದವರೇ ನೀವು ಹುಡುಗಿಯರು ಹೊರಗೆ ಯಾಕೆ ನಿಂತಿದ್ದೀರಿ ಎಂದು ನಮ್ಮಲ್ಲಿ ಕೇಳಿದರು. ನಾವು ಮುಟ್ಟಾಗಿರುವುದರಿಂದ ಬೇರೆಡೆ ಕೂರುವಂತೆ ಹೇಳಿದರು ಎಂದೆವು.

ಅವರಿಗೆ ತುಂಬಾ ದುಃಖವಾಯಿತು, ಇದೆಲ್ಲವೂ ನೈಸರ್ಗಿಕ ಪ್ರಕ್ರಿಯೆ ಈ ಬಗ್ಗೆ ಮುಜುಗರ ಯಾಕೆ ಎಂದು ಎಲ್ಲರೊಂದಿಗೆ ಊಟಕ್ಕೆ ಕೂರುವಂತೆ ಹೇಳಿದರು.ನಗುತ್ತಾ ಈ ರೀತಿಯ ನೈಸರ್ಗಿಕ ಪ್ರಕ್ರಿಯೆ ಬಗ್ಗೆ ನಾಚಿಕೆ ಪಟ್ಟುಕೊಳ್ಳಬೇಡಿ, ನಿಮ್ಮ ದೇಹದ ಬಗ್ಗೆ ಹೆಮ್ಮೆ ಪಡಿ. ಹೀಗಂತ ಹೇಳಿದ ವ್ಯಕ್ತಿಯೇ ನಡೆದಾಡುವ ದೇವರು. ಅವರ ಮಾತುಗಳು ನಮ್ಮ ಮೇಲೆ ಪ್ರಭಾವ ಬೀರಿದವು, ಅವರು ಎಲ್ಲರಿಗೂ ಮಾದರಿಯಾಗಲಿ.

ಮುನ್ನಡೆಗೆ ಕಣ್ಣಾದ ಗುರುವೇ ಬಾರಾ

ಕನ್ನಡಕ ಧರಿಸಿದೇ ಓದಿದಾಗ ಅಚ್ಚರಿ! 

ನಿಸ್ವಾರ್ಥ ಬದುಕು ಬದುಕಿದ ಪುಣ್ಯ ಜೀವಿ

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !