ಭಾನುವಾರ, ಏಪ್ರಿಲ್ 18, 2021
24 °C

ಸುದ್ದಿ ಉದ್ಯಮಕ್ಕೆ 3 ವರ್ಷಗಳಲ್ಲಿ ₹ 7 ಸಾವಿರ ಕೋಟಿ ನೀಡಲಿದೆ ಫೇಸ್‌ಬುಕ್

ಎಎಫ್‍ಪಿ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗೂಗಲ್‌ ಹಾದಿಯನ್ನೇ ಅನುಸರಿಸುತ್ತಿರುವ ಜನಪ್ರಿಯ ಜಾಲತಾಣ ಸಂಸ್ಥೆ ಫೇಸ್‌ಬುಕ್, ಮುಂದಿನ ಮೂರು ವರ್ಷಗಳಲ್ಲಿ ಸುದ್ದಿ ಉದ್ಯಮವನ್ನು ಬೆಂಬಲಿಸಲು 1 ಬಿಲಿಯನ್ ಡಾಲರ್ (ಸುಮಾರು ₹ 7,200 ಕೋಟಿ) ಹೂಡಿಕೆ ಮಾಡಲು ಯೋಜಿಸಿರುವುದಾಗಿ ಹೇಳಿದೆ.

ಸಾಮಾಜಿಕ ವೇದಿಕೆಗಳು ಸುದ್ದಿ ಸಂಸ್ಥೆಗಳ ಜೊತೆ ಆದಾಯ ಹಂಚಿಕೆ ಕಾನೂನಿನ ಕುರಿತಂತೆ ಆಸ್ಟ್ರೇಲಿಯಾ ಜೊತೆ ಸಂಘರ್ಷ ನಡೆಸುತ್ತಿರುವ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್, 2018 ರಿಂದ ಸುದ್ದಿ ಉದ್ಯಮದಲ್ಲಿ 600 ಮಿಲಿಯನ್ ಹೂಡಿಕೆ ಮಾಡಿರುವುದಾಗಿ ಹೇಳಿದೆ.

ಮುಂದಿನ ಮೂರು ವರ್ಷಗಳಲ್ಲಿ ಸುದ್ದಿ ಉದ್ಯಮಕ್ಕೆ 1 ಬಿಲಿಯನ್ ಡಾಲರ್ (ಸುಮಾರು ₹ 7,200 ಕೋಟಿ ) ಪಾವತಿಸುವುದಾಗಿ ಅಕ್ಟೋಬರ್‌ನಲ್ಲಿ ಗೂಗಲ್ ಹೇಳಿತ್ತು.

ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಗೋಚರಿಸುವ ಸುದ್ದಿಗಳಿಗೆ ಗೂಗಲ್ ಮತ್ತು ಫೇಸ್‌ಬುಕ್ ಹಣ ಪಾವತಿಸಬೇಕೆಂದು ಮಾಧ್ಯಮ ಸಂಸ್ಥೆಗಳು ಬಯಸುತ್ತವೆ. ಯೂರೋಪ್ ಮತ್ತು ಆಸ್ಟ್ರೇಲಿಯಾದ ಸರ್ಕಾರಗಳು ಈ ದೃಷ್ಟಿಕೋನಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಈ ಎರಡು ಟೆಕ್ ಕಂಪನಿಗಳು ಅಮೆರಿಕದ ಡಿಜಿಟಲ್ ಜಾಹೀರಾತು ಆದಾಯದ ಬಹುಪಾಲನ್ನು ಪಡೆದುಕೊಳ್ಳುತ್ತವೆ. ಅದು ಇತರ ಸಮಸ್ಯೆಗಳ ನಡುವೆ ಒದ್ದಾಡುತ್ತಿರುವ ಪ್ರಕಾಶಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಫೇಸ್‌ಬುಕ್ ಮತ್ತು ಗೂಗಲ್‌ನೊಂದಿಗೆ ಪಾವತಿ ಮಾತುಕತೆ ನಡೆಸಲು ಪ್ರಕಾಶಕರಿಗೆ ಸಹಾಯ ಮಾಡುವ ಪ್ರಸ್ತಾಪಿತ ಶಾಸನವನ್ನು ತಿದ್ದುಪಡಿ ಮಾಡಲು ಸರ್ಕಾರ ಒಪ್ಪಿದ ನಂತರ ಆಸ್ಟ್ರೇಲಿಯಾದಲ್ಲಿ ಸುದ್ದಿ ಲಿಂಕ್‌ಗಳ ಮೇಲಿನ ನಿಷೇಧವನ್ನು ತೆಗೆದುಹಾಕುವುದಾಗಿ ಫೇಸ್‌ಬುಕ್ ಮಂಗಳವಾರ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಿ ಸಾಂಕ್ರಾಮಿಕ, ಸಾರ್ವಜನಿಕ ಆರೋಗ್ಯ ಮತ್ತು ತುರ್ತು ಸೇವೆಗಳ ಪ್ರವೇಶವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿದ್ದರಿಂದ ಸುದ್ದಿ ಲಿಂಕ್ ನಿಷೇಧಿಸಿದ್ದ ಫೇಸ್‌ಬುಕ್ ನಿರ್ಧಾರ ಟೀಕೆಗೆ ಗುರಿಯಾಗಿತ್ತು. .

ಗೂಗಲ್ ಈಗಾಗಲೇ ಆಸ್ಟ್ರೇಲಿಯಾದ ಮಾಧ್ಯಮ ಕಂಪನಿಗಳೊಂದಿಗೆ ಕಂಟೆಂಟ್ ಪರವಾನಗಿ ಒಪ್ಪಂದಗಳಿಗೆ ಸಹಿ ಹಾಕಿತ್ತು. ಸಂಸ್ಥೆಯು ಆಸ್ಟ್ರೇಲಿಯಾದ 50 ಕ್ಕೂ ಹೆಚ್ಚು ಪ್ರಕಾಶಕರು ಮತ್ತು ಜಾಗತಿಕವಾಗಿ 500 ಕ್ಕೂ ಹೆಚ್ಚು ಪ್ರಕಾಶಕರೊಂದಿಗೆ ಒಪ್ಪಂದ ಹೊಂದಿರುವುದಾಗಿ ಹೇಳುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು