ಭಾನುವಾರ, ಆಗಸ್ಟ್ 1, 2021
22 °C
ಸರ್ಕಾರದ ಮಧ್ಯಂತರ ಆದೇಶ ಪಾಲನೆ; ಸ್ವಯಂ ಪ್ರೇರಣೆಯಿಂದ ಆ್ಯಪ್ ಹಿಂಪಡೆದ ಡೆವಲಪರ್‌ಗಳು

ಗೂಗಲ್, ಆ್ಯಪ‍ಲ್ ಪ್ಲೇಸ್ಟೋರ್‌ನಿಂದ ಮರೆಯಾದ ನಿಷೇಧಿತ ಆ್ಯಪ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರವು ಇತ್ತೀಚಿಗೆ ನಿಷೇಧಿಸಿದ ಚೀನಾದ 59 ಚೀನಾ ಆ್ಯಪ್‌ಗಳನ್ನು ಗೂಗಲ್‌ ಮತ್ತು ಆ್ಯಪಲ್‌ ಸಂಸ್ಥೆಗಳು ತಮ್ಮ ಆ್ಯಪ್‌ ಸ್ಟೋರ್‌ಗಳಿಂದ ತೆಗೆಯುವ ಪ್ರಕ್ರಿಯೆ ಆರಂಭಿಸಿವೆ. ಗೂಗಲ್ ಈಗಾಗಲೇ ಎಲ್ಲ 59 ಆ್ಯಪ್‌ಗಳನ್ನು ಸ್ಥಗಿತಗೊಳಿಸಿದ್ದು, ಆ್ಯಪಲ್ ಕೂಡ ಬಹುತೇಕ ಆ್ಯಪ್‌ಗಳನ್ನು ಸ್ಥಗಿತ ಮಾಡಿದೆ. 

‘ಸರ್ಕಾರದ ಮಧ್ಯಂತರ ಆದೇಶವನ್ನು ಪರಿಶೀಲಿಸಲಾಗುತ್ತಿದೆ. ಸ್ಥಗಿತಗೊಳಿಸುತ್ತಿರುವ ಮಾಹಿತಿಯನ್ನು ಅಪ್ಲಿಕೇಷನ್‌ ಡೆವಲಪರ್‌ಗಳಿಗೆ ನೀಡಲಾಗಿದೆ’ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ. ಆದರೆ ಯಾವ ಯಾವ ಆ್ಯಪ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿಲ್ಲ. 

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಆದೇಶವನ್ನು ಗೂಗಲ್ ಪಾಲಿಸುತ್ತಿದ್ದು, ಆ್ಯಪಲ್ ಕೂಡ ಇದೇ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ.  

ಚೀನಾದ ಟಿಕ್‌ಟಾಕ್, ಕ್ಯಾಮ್‌ಸ್ಕ್ಯಾನರ್ ಸೇರಿದಂತೆ 59 ಆ್ಯಪ್‌ಗಳ ಮೇಲೆ ಕೇಂದ್ರ ಸರ್ಕಾರ ಸೋಮವಾರ ನಿಷೇಧ ವಿಧಿಸಿತ್ತು. ಆದೇಶವನ್ನು 24 ಗಂಟೆಯೊಳಗೆ ಪಾಲಿಸುವಂತೆ ದೂರಸಂಪರ್ಕ ಸೇವಾದಾತರು, ಇಂಟರ್ನೆಟ್ ಸೇವಾದಾತರು ಹಾಗೂ ಆ್ಯಪಲ್, ಗೂಗಲ್ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿತ್ತು. ನಿಷೇಧಿತ ಆ್ಯಪ್‌ಗಳ ಡೆವಲಪರ್‌ಗಳು ಸ್ವಯಂ ಪ್ರೇರಣೆಯಿಂದ ಗೂಗಲ್‌ಪ್ಲೇ ಸ್ಟೋರ್‌ ಮತ್ತು ಆ್ಯಪ್ ಸ್ಟೋರ್‌ಗಳಿಂದ ತಮ್ಮ ಆ್ಯಪ್‌ಗಳನ್ನು ವಾಪಸ್ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು