ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆ ಸುದ್ದಿ: ಗೂಗಲ್‌ನಲ್ಲಿಯೂ ಲಸಿಕೆ ಲಭ್ಯತೆ, ಬುಕ್ಕಿಂಗ್ ಕುರಿತ ಮಾಹಿತಿ ಲಭ್ಯ

Last Updated 1 ಸೆಪ್ಟೆಂಬರ್ 2021, 12:44 IST
ಅಕ್ಷರ ಗಾತ್ರ

ನವದೆಹಲಿ: ಜಗತ್ತಿನ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್‌ನಲ್ಲಿ ಈ ವಾರದಿಂದ ದೇಶದ 13,000 ಸ್ಥಳಗಳಲ್ಲಿ ಲಸಿಕೆ ಲಭ್ಯತೆ ಮತ್ತು ಅಪಾಯಿಂಟ್‌ಮೆಂಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಬಳಕೆದಾರರಿಗೆ ಸಾಧ್ಯವಾಗುತ್ತದೆ ಎಂದು ಸಂಸ್ಥೆ ಬುಧವಾರ ಹೇಳಿದೆ. ಸರ್ಚ್, ಮ್ಯಾಪ್ಸ್ ಮತ್ತು ಅಸಿಸ್ಟೆಂಟ್ ಮೂರು ಕಡೆಗಳಲ್ಲಿ ಮಾಹಿತಿ ಲಭ್ಯವಿರಲಿದೆ ಎಂದು ಗೂಗಲ್ ತಿಳಿಸಿದೆ.

ಕೋ–ವಿನ್ ಅಪ್ಲಿಕೇಶನ್ನಿನ ನೈಜ-ಸಮಯದ ಡೇಟಾದ ಆಧಾರದ ಮೇಲೆ ಈ ವ್ಯವಸ್ಥೆ ಕೆಲಸ ಮಾಡುತ್ತದೆ. ಪ್ರತಿ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳ ಲಭ್ಯತೆ, ಲಸಿಕೆಗಳು ಮತ್ತು ನೀಡಲಾದ ಡೋಸ್‌ಗಳು (ಡೋಸ್ 1 ಅಥವಾ ಡೋಸ್ 2), ಬೆಲೆ ವಿವರ (ಪೇಯ್ಡ್ ಅಥವಾ ಉಚಿತ) ಮತ್ತು ಬುಕ್ಕಿಂಗ್‌ಗಾಗಿ ಕೋವಿನ್ ಆ್ಯಪ್ ಲಿಂಕ್ ಮಾಹಿತಿ ಇರಲಿದೆ ಎಂದು ಗೂಗಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಳಕೆದಾರರು ತಮ್ಮ ಹತ್ತಿರದ ಲಸಿಕೆ ಕೇಂದ್ರಗಳನ್ನು ಹುಡುಕಿದಾಗ ಅಥವಾ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಗೂಗಲ್ ಸರ್ಚ್, ಮ್ಯಾಪ್ಸ್ ಮತ್ತು ಗೂಗಲ್ ಅಸಿಸ್ಟೆಂಟ್‌ನಲ್ಲಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ತೋರಿಸಲಾಗುತ್ತದೆ.

ಇಂಗ್ಲಿಷ್ ಜೊತೆಗೆ, ಬಳಕೆದಾರರು ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಮತ್ತು ಮರಾಠಿ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲೂ ಹುಡುಕಬಹುದು.

ಈ ಸೌಲಭ್ಯವನ್ನು ಭಾರತದಾದ್ಯಂತ ಎಲ್ಲಾ ಲಸಿಕೆ ಕೇಂದ್ರಗಳಿಗೆ ವಿಸ್ತರಿಸಲು ಕೋ-ವಿನ್ ತಂಡದೊಂದಿಗೆ ನಿಕಟ ಪಾಲುದಾರಿಕೆಯನ್ನು ಮುಂದುವರಿಸುವುದಾಗಿ ಗೂಗಲ್ ಹೇಳಿದೆ.

ಈ ವರ್ಷದ ಮಾರ್ಚ್‌ನಲ್ಲಿ, ಗೂಗಲ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಭಾಗಿತ್ವದಲ್ಲಿ ಕೋವಿಡ್ -19 ಲಸಿಕೆ ಕೇಂದ್ರಗಳ ಮಾಹಿತಿಯನ್ನು ತೋರಿಸಲು ಆರಂಭಿಸಿತ್ತು

‘ತಮ್ಮ ಜೀವ ಕಾಪಾಡಿಕೊಳ್ಳಲು ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ತಮ್ಮ ಸುತ್ತಲಿನ ಮಾಹಿತಿಯನ್ನು ಹುಡುಕುತ್ತಲೇ ಇರುವುದರಿಂದ, ನಮ್ಮ ವೇದಿಕೆಗಳಲ್ಲಿ ಅಧಿಕೃತ ಮತ್ತು ಸಕಾಲಿಕ ಮಾಹಿತಿಯನ್ನು ಸೇರಿಸಲು ಮತ್ತು ಹಂಚಿಕೊಳ್ಳಲು ನಾವು ಬದ್ಧರಾಗಿರುತ್ತೇವೆ’ಎಂದು ಗೂಗಲ್ ಸರ್ಚ್‌ನ ನಿರ್ದೇಶಕಿ ಹೇಮಾ ಬುಡರಾಜು ಹೇಳಿದರು.

ದೇಶದಲ್ಲಿ ಮಂಗಳವಾರ, 1.33 ಕೋಟಿ ಕೋವಿಡ್ -19 ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ. ದೇಶದಲ್ಲಿ ನೀಡಲಾದ ಕೋವಿಡ್ ಲಸಿಕೆ ಸಂಖ್ಯೆ 65.41 ಕೋಟಿ ಡೋಸ್ ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT