ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಟ್ವೀಟಿಗರು; #Kannada ಟ್ರೆಂಡಿಂಗ್

Last Updated 10 ಆಗಸ್ಟ್ 2020, 3:36 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಡಿಎಂಕೆ ಮಹಿಳಾ ಘಟಕದ ಕಾರ್ಯದರ್ಶಿ ಮತ್ತು ಸಂಸದೆ ಕನಿಮೋಳಿ ಭಾನುವಾರ ವಿಮಾನ ನಿಲ್ದಾಣದಲ್ಲಿ ತನಗಾದ ಅನುಭವದ ಬಗ್ಗೆ ಟ್ವೀಟ್ ಮಾಡಿ ಹಿಂದಿ ಹೇರಿಕೆಯ ವಿರುದ್ಧ ದನಿಯೆತ್ತಿದ್ದರು. ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರಿಕೆಯನ್ನು ಖಂಡಿಸಿ #hindiimposition ಹ್ಯಾಷ್‌ಟ್ಯಾಗ್‌ನಡಿ ಟ್ವೀಟಿಗರು ಕನಿಮೋಳಿ ಅಭಿಪ್ರಾಯವನ್ನುಬೆಂಬಲಿಸಿದ್ದರು.

ಇದರ ಬೆನ್ನಲ್ಲೇ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿನ ಸಿಬ್ಬಂದಿ ಸ್ಥಳೀಯ ಭಾಷೆಗಳಲ್ಲಿ ಸಂವಹನ ನಡೆಸಬೇಕು ಎಂದು ಟ್ವಿಟರ್‌ನಲ್ಲಿ ಹಲವಾರು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ,ನೈರುತ್ಯ ರೈಲ್ವೆ ಬೆಂಗಳೂರು ಕೆಎಸ್‌ಆರ್ (ಕಂಠೀರವ ಸಂಗೊಳ್ಳಿ ರಾಯಣ್ಣ) ರೈಲು ನಿಲ್ದಾಣದಲ್ಲಿ ಕಿಯೋಸ್ಕ್ ಸ್ಥಾಪಿಸಿದ ಬಗ್ಗೆ ಆಗಸ್ಟ್ 7ರಂದು ಟ್ವೀಟ್ ಮಾಡಿತ್ತು.ಅಲ್ಲಿ ಸ್ಥಾಪಿಸಲಾಗಿರುವ ಕಿಯೋಸ್ಕ್ ನಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೂಚನೆಗಳಿರುವುದನ್ನು ಪ್ರಶ್ನಿಸಿ @malayaliatticus ಎಂಬ ಟ್ವೀಟಿಗ ದಕ್ಷಿಣ ಭಾರತದಲ್ಲಿ ಹಿಂದಿ ಯಾಕೆ ಎಂದು ಪ್ರಶ್ನಿಸಿದ್ದಾರೆ.ಇದಕ್ಕೆ ಉತ್ತರಿಸಿದಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ ಅವರDRM Bengaluru (@drmsbc) ಟ್ವಿಟರ್ ಖಾತೆ ಯಾಕೆಂದರೆ ಇದು ಭಾರತ ಎಂದು ಉತ್ತರಿಸಿತ್ತು.

ಡಿಆರ್‌ಎಂ ಟ್ವೀಟ್‌ಗೆ ಪ್ರತಿಕ್ರಿಯಿಸಿದ ವಿನಾಯಕ್ ತೇಳಿ (@VINAYAKTELI) ಎಂಬ ಟ್ವೀಟಿಗ ನಾವು ಏನು ಕೇಳುತ್ತಿದ್ದೇವೆ ಎಂಬುದು ನಿಮಗೆ ಗೊತ್ತಾ? ನೀವು ಹಿಂದಿಯನ್ನು ರಾಷ್ಟ್ರೀಯತೆ ಜತೆ ತಳುಕು ಹಾಕುತ್ತಿದ್ದೀರಿ. ನಾವು ಭಾರತೀಯರು ಆದರೆ ಹಿಂದಿ ನನ್ನ ಭಾಷೆಯಲ್ಲ. ನನ್ನ ಮಾತೃಭಾಷೆಯಲ್ಲಿ ಮಾಹಿತಿ ಕೇಳುವ ಹಕ್ಕು ನನಗಿದೆ ಎಂದು ಟ್ವೀಟಿಸಿದ್ದಾರೆ.

ಈ ಟ್ವೀಟ್‍‌ಗೆ ಉತ್ತರಿಸಿದ ಡಿಆರ್‌ಎಂ ಬೆಂಗಳೂರು 'ಪ್ರಧಾನ ಮಾಹಿತಿಗಳು ಸ್ಥಳೀಯ ಭಾಷೆಯಲ್ಲಿಯೇ ಲಭ್ಯವಾಗುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಹೊರಗಿನ ಏಜೆನ್ಸಿಯೊಂದು ದೇಣಿಗೆ ನೀಡಿದ ವಸ್ತುವಿನಲ್ಲಿ ಚಿಕ್ಕದೊಂದು ಸ್ಟಿಕ್ಕರ್ ಇದ್ದರೂ ಭಾಷೆಯ ಬಗ್ಗೆ 'ಸಮಸ್ಯೆ' ಎಂದು ಕೂಗುವುದು ಸರಿಯಲ್ಲ. ಶ್ರಮವನ್ನು ಶ್ಲಾಘಿಸುವ ಬದಲು ಎಲ್ಲ ಸಮಯ ನೀವು ಹಿಂದಿ ವಿರೋಧಿ ನಿಲುವು ವ್ಯಕ್ತಪಡಿಸುತ್ತಿದ್ದೀರಿ ಎಂದು ಟ್ವೀಟಿಸಿದೆ.

ಡಿಎಂಆರ್ ಬೆಂಗಳೂರು ಮಾಡಿರುವ ಈ ಟ್ವೀಟ್ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಟ್ವಿಟರ್‌ನಲ್ಲಿ #Kannada ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

ಇಲ್ಲಿ ಕನ್ನಡ ಎಲ್ಲಿದೆ?

ಇದು ಬೆಂಗಳೂರು ರೈಲು ನಿಲ್ದಾಣ, ಕನ್ನಡೇತರಿಗೆ ಬೇಕಾಗಿ ಸ್ಥಾಪಿಸಿದ್ದಾಗಿರಬಹುದು ಎಂದು ಲಾವಣ್ಯ ಬಲ್ಲಾಳ್ ಟ್ವೀಟಿಸಿದ್ದಾರೆ.

ಸ್ಥಳೀಯರ ಭಾವನೆಗಳಿಗೆ ಸ್ಪಂದಿಸಿ ಇದನ್ನು ತಿದ್ದಿ

ಕರ್ನಾಟಕದಲ್ಲಿರುವ ಶೇ.80ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಸಂಘಿಗಳಲ್ಲ. ಹೆಚ್ಚಿನವರು ಈಗ ಹಿಂದಿ ಹೇರಿಕೆ ಬಗ್ಗೆ ದನಿಯೆತ್ತುತ್ತಿದ್ದಾರೆ.

ಹಿಂದಿ ರಾಷ್ಟ್ರಭಾಷೆಯಲ್ಲ, ನಮ್ಮ ಭಾಷೆಯಲ್ಲಿಯೇ ಸೇವೆ ನೀಡಿ

ಯಾವುದೇ ಕನ್ನಡಿಗ ರಾಜಕಾರಣಿ ಕನಿಮೊಳಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆಯೇ?

ರಾಮರಾಜ್ಯದಲ್ಲಿ ಒಂದೇ ಭಾಷೆ ಇರುತ್ತಾ?

ಒಂದಕ್ಕಿಂತ ಹೆಚ್ಚು ಭಾಷೆಗಳಿರುವ ದೇಶ ಭಾರತ, ಹಿಂದಿ ಹೇರಿಕೆ ಬೇಡ

ಕನ್ನಡಕ್ಕೆ ಗೌರವ ಕೊಡಿ, ಇಲ್ಲಾಂದ್ರೆ ತೊಲಗಿ

ಹಿಂದಿಯನ್ನು ಮಹಾರಾಣಿಯಂತೆ ಗೌರವಿಸುವುದು ನಿಲ್ಲಿಸಿ

2000 ವರ್ಷಗಳಿಂದಲೇನಾವು ಕನ್ನಡಿಗರು, 73 ವರ್ಷಗಳಿಂದ ನಾವು ಭಾರತೀಯರು

ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಎಷ್ಟು ಸಿಬ್ಬಂದಿಗಳು ಕನ್ನಡ ಮಾತನಾಡುತ್ತಾರೆ?

ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಕನ್ನಡ ಮಾತನಾಡುವುದೇ ಇಲ್ಲ

ನೀವು ಮಾಡಿದ ಪ್ರಯತ್ನಗಳಾದರೂ ಏನು? ಪಟ್ಟಿ ಮಾಡ್ತೀರಾ?

ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಗಳಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದರೂ ಅವರು ಹಿಂದಿಯಲ್ಲಿ ಮಾತು ಮುಂದುವರಿಸುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT