ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಪರಿಹಾರ ಶಿಬಿರದಲ್ಲಿ ಸಚಿವ ಕಣ್ಣಂತಾನಂ ನಿದ್ದೆ, ಫೇಸ್‌ಬುಕ್‌ನಲ್ಲಿ ಟ್ರೋಲ್

Last Updated 22 ಆಗಸ್ಟ್ 2018, 9:06 IST
ಅಕ್ಷರ ಗಾತ್ರ

ಕೋಯಿಕ್ಕೋಡ್: ಕೇರಳ ಪ್ರವಾಹಪರಿಹಾರ ಶಿಬಿರದಲ್ಲಿ ನಿದ್ರಿಸುತ್ತಿರುವ ಚಿತ್ರವನ್ನು ಫೇಸ್‌ಬುಕ್‌ ಪುಟದಲ್ಲಿ ಶೇರ್ ಮಾಡಿದ್ದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದ್ದಾರೆ.

ಮಂಗಳವಾರರಾತ್ರಿ ಶಿಬಿರದಲ್ಲಿ ನಿದ್ದೆ ಮಾಡುತ್ತಿರುವ ಫೋಟೊವನ್ನು ಅಪ್‌‍ಲೋಡ್ ಮಾಡಿ, ಚಂಞನಾಶ್ಶೇರಿ, ಎಸ್,ಬಿ ಹೈಸ್ಕೂಲ್ ನಲ್ಲಿರುವ ಶಿಬಿರದಲ್ಲಿ ಎಂಬ ಶೀರ್ಷಿಕೆ ನೀಡಿದ್ದರು ಸಚಿವರು.

ಪೋಸ್ಟ್ ಅಪ್‍ಲೋಡ್ ಆದ ಕೆಲವೇ ಹೊತ್ತಿನಲ್ಲಿ ಟ್ರೋಲ್ ಸುರಿಮಳೆಯಾಗಿದೆ.ನೆಲದಲ್ಲಿ ಮಲಗಿರುವ ಸಚಿವರ ಚಿತ್ರವನ್ನು ಇಲ್ಲಿಯವರೆಗೆ 6700 ಮಂದಿ ಶೇರ್ ಮಾಡಿದ್ದಾರೆ. 12000 ಕಾಮೆಂಟ್, 27000 ಲೈಕುಗಳು ಸಿಕ್ಕಿವೆ.

ಕೆಲವೊಂದು ಕಾಮೆಂಟ್‍ಗಳು ಹೀಗಿವೆ
"ಫೇಸ್‌ಬುಕ್‌ಗೆ ಸಾವಿರ ನಮಸ್ಕಾರ
ನಾವು ನಿದ್ರಿಸುವಾಗ ನಮಗೆ ಗೊತ್ತಿಲ್ಲದಂತೆ ನಮ್ಮ ನಿದ್ದೆಯ ಫೋಟೊ ಅಪ್‍ಲೋಡ್ ಮಾಡುವ ಫೀಚರ್ ಶುರು ಮಾಡಿದ್ದಕ್ಕೆ
ಧನ್ಯವಾದಗಳು ಕಣ್ಣಂತಾನಂಜೀ ಧನ್ಯವಾದಗಳು
ಈ ಫೀಚರ್ ಅನ್ನುಮಲಯಾಳಿಗಳಿಗೆ ಪರಿಚಯಿಸಿದ್ದಕ್ಕೆ "


"ಮೊದಲು ಸರ್ ನಿದ್ದೆ ಮಾಡಿದರು, ಆಗ ಇನ್ನು ಯಾರೋ ಫೋಟೊ ಕ್ಲಿಕ್ಕಿಸಿದ್ದರು, ಸ್ವಲ್ಪ ಹೊತ್ತಾದ ಮೇಲೆ ಇವರು ಎದ್ದು, ಆ ಫೋಟೊ ಅವರಿಂದ ಪಡೆದು ಫೇಸ್‌ಬುಕ್‌ನಲ್ಲಿ ಅಪ್‍ಲೋಡ್ ಮಾಡಿದರು, ಆಮೇಲೆ ನಿದ್ದೆ ಮಾಡಿದರು, ಇಷ್ಟಕ್ಕೆ ನೀವು ಹೀಗೆಲ್ಲಾ ಹೇಳುವುದಾ? ನಿದ್ದೆ ಮಾಡಲು ಬಿಡುವುದಿಲ್ಲವೇ? "


"ಧನ್ಯವಾದಗಳು ಸರ್ ನಿಮಗೆ (ಟ್ರೋಲ್ ಅಲ್ಲ)
ಪ್ರಳಯ ದುರಂತದಲ್ಲಿ ಎಲ್ಲ ನಷ್ಟವಾಗಿರುವ ಕೇರಳದ ಜನರನ್ನು ಹೀಗೆ ನಗಿಸಿದಿರಲ್ವಾ
ಜಂಬೋ ಸರ್ಕಸ್ ನ ಜೋಕರ್‍ ಗೆ ಕೂಡಾ ಸಾಧ್ಯವಾಗದ ಕಾರ್ಯವನ್ನು ನೀವು ಮಾಡಿದ್ದೀರಿ. ಇದೇ ನೀವು ಮಾಡಿದ ದೊಡ್ಡ ಕೆಲಸ. "

ಟ್ರೋಲ್ ಮಳೆಯಾಗುತ್ತಿದ್ದಂತೆ ಬುಧವಾರ ಬೆಳಗ್ಗೆ ಕಣ್ಣಂತಾನಂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅವರ ಫೇಸ್‌ಬುಕ್‌ ಬರಹ ಹೀಗಿದೆ.

ಕೇರಳದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಿದ್ದೆ. ಪ್ರವಾಹ ಪೀಡಿತರೊಂದಿಗೆ ಹೆಚ್ಚಿನ ಸಮಯ ಕಳೆದು ಅವರಿಗೆ ಸಾಂತ್ವನ ಹೇಳಿದ್ದೇನೆ.ರಾತ್ರಿ ಶಿಬಿರದಲ್ಲಿಯೇ ಕಳೆದೆ. ಆ ಹೊತ್ತಿನಲ್ಲಿ ನನ್ನ ಸೋಷ್ಯಲ್ ಮೀಡಿಯಾ ಪೇಜ್ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ನಾನು ನಿದ್ದೆ ಮಾಡುತ್ತಿರುವ ಫೋಟೊವನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT