ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ಗೆ ಹೊಸ ಸಿಇಒ ಹೆಸರು ಘೋಷಣೆ ಮಾಡಿದ ಇಲಾನ್ ಮಸ್ಕ್

ಇಲಾನ್ ಮಸ್ಕ್ ಅವರಿಂದ ಲಿಂಡಾ ಯಾಕಾರಿನೊ ಅವರ ಹೆಸರು ಘೋಷಣೆ
Published 12 ಮೇ 2023, 16:15 IST
Last Updated 12 ಮೇ 2023, 16:15 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೋ: ಟ್ವಿಟರ್‌ಗೆ ಹೊಸ ಸಿಇಒ ನೇಮಕ ಮಾಡಿದ್ದಾಗಿ ಮಾಲೀಕ ಇಲಾನ್ ಮಸ್ಕ್‌ ಹೇಳಿದ್ದರು. ಅದರೆ ಹೊಸ ಸಿಇಒ ಹೆಸರನ್ನು ಮಸ್ಕ್‌ ಬಹಿರಂಗಪಡಿಸಿರಲಿಲ್ಲ.

ಇದೀಗ ಹೊಸ ಸಿಇಒ ಹೆಸರು ಬಹಿರಂಗಪಡಿಸಿದ್ದಾರೆ. ಲಿಂಡಾ ಯಾಕಾರಿನೊ ಎನ್ನುವ ಟೆಕ್ ಮಹಿಳೆ ಹಾಗೂ ಹಣಕಾಸು ತಜ್ಞೆಯನ್ನು ಮಸ್ಕ್ ಟ್ವಿಟರ್‌ನ ಹೊಸ ಸಿಇಒ ಆಗಿ ನೇಮಿಸಿದ್ದಾರೆ.

ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಅವರು, ಹೊಸ ಸಿಇಒ ಲಿಂಡಾ ಅವರನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಲಿಂಡಾ ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಈ ಫ್ಲಾಟ್‌ಫಾರ್ಮ್‌ ಅನ್ನು ಎಕ್ಸ್ ಆ್ಯಂಡ್ ಎವರಿತಿಂಗ್ ಅಪ್ಲಿಕೇಶನ್ ಆಗಿ ಪರಿವರ್ತಿಸಲು ಎಲ್ಲ ಸಹಕಾರ ನೀಡುವುದಾಗಿ ಅವರು ಹೇಳಿದ್ದಾರೆ.

ಅಲ್ಲದೇ ತಾವು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಜವಾವ್ದಾರಿ ನಿರ್ವಹಿಸುವುದಾಗಿ ಎಂದು ಮಸ್ಕ್‌ ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ $44 ಬಿಲಿಯನ್‌ ಡಾಲರ್‌ಗೆ ಟ್ವಿಟರ್‌ ಅನ್ನು ಖರೀದಿ ಮಾಡಿದ್ದ ಮಸ್ಕ್‌, ಆ ವೇಳೆ ಸಿಇಒ ಆಗಿದ್ದ ಭಾರತ ಮೂಲದ ಪರಾಗ್‌ ಅಗರವಾಲ್ ಅವರನ್ನು ವಜಾ ಮಾಡಿ, ತಾವು ವಹಿಸಿಕೊಂಡಿದ್ದರು. ಹೊಸ ಸಿಇಒ ಸಿಕ್ಕಿದ ಕೂಡಲೇ ತಾನು ಕೆಳಗಿಳಿಯುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT