ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾಗ್ರಾಮ್‌ ಸಮಸ್ಯೆ ಸರಿಪಡಿಸಲಾಗಿದೆ ಎಂದ ಮೆಟಾ

Last Updated 27 ಮೇ 2022, 2:12 IST
ಅಕ್ಷರ ಗಾತ್ರ

ಮೆಟಾ ಒಡೆತನದ, ಫೋಟೊ ಶೇರಿಂಗ್ ಅಪ್ಲಿಕೇಶನ್‌ ಇನ್‌ಸ್ಟಾಗ್ರಾಮ್, ಗುರುವಾರ ಬಹಳಷ್ಟು ಮಂದಿ ಬಳಕೆದಾರರಿಗೆ ಲಭ್ಯವಾಗದೇ ಇದ್ದ ಕುರಿತು ಸಂಸ್ಥೆ ಪ್ರತಿಕ್ರಿಯಿಸಿದ್ದು, ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದಿದೆ.

ಇನ್‌ಸ್ಟಾಗ್ರಾಮ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು 6000ಕ್ಕೂ ಹೆಚ್ಚಿನ ಬಳಕೆದಾರರು ಗುರುವಾರ ಡೌನ್‌ಡಿಟೆಕ್ಟರ್.ಕಾಂನಲ್ಲಿ ವರದಿ ಮಾಡಿದ್ದರು.

ಜತೆಗೆ, ಬಹಳಷ್ಟು ಮಂದಿ ಟ್ವಿಟರ್ ಮೂಲಕವೂ ಇನ್‌ಸ್ಟಾಗ್ರಾಮ್ ಸಮಸ್ಯೆಯ ಕುರಿತು ಟ್ವೀಟ್ ಮಾಡಿದ್ದರು.

ಇನ್‌ಸ್ಟಾಗ್ರಾಮ್ ಇಮೇಜ್ ಪೋಸ್ಟ್ ಮತ್ತು ಸ್ಟೋರೀಸ್ ಪೋಸ್ಟ್ ಮಾಡುವಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಟಾ ಕಂಪನಿ, ತೊಂದರೆಯಾಗಿರುವ ಬಗ್ಗೆ ನಮಗೆ ತಿಳಿದಿದೆ. ಅಡಚಣೆಗಾಗಿ ವಿಷಾದಿಸುತ್ತೇವೆ. ನಮ್ಮ ತಂತ್ರಜ್ಞರ ತಂಡ ಸಮಸ್ಯೆಯನ್ನು ಸರಿಪಡಿಸಿದೆ. ಇನ್‌ಸ್ಟಾಗ್ರಾಮ್ ಎಲ್ಲರ ಬಳಕೆಗೆ ಲಭ್ಯವಾಗುತ್ತಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT