ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ‘ಮನದ ಮಾತು’ ಬಾನುಲಿ ಕಾರ್ಯಕ್ರಮದ ಆಗಸ್ಟ್ 30ರ ಆವೃತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊವನ್ನು ಸುಮಾರು 10 ಲಕ್ಷದಷ್ಟು ಜನರು ‘ಡಿಸ್‌ಲೈಕ್’ ಮಾಡಿದ್ದಾರೆ. 2.3 ಲಕ್ಷದಷ್ಟು ಜನರು ‘ಲೈಕ್’ ಮಾಡಿದ್ದಾರೆ. ಮನದ ಮಾತು ಕಾರ್ಯಕ್ರಮಕ್ಕೆ ಬರುತ್ತಿರುವ ‘ಡಿಸ್‌ಲೈಕ್’ಗಳ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಆಗಸ್ಟ್ 30ರಂದು ಪೋಸ್ಟ್ ಮಾಡಲಾಗಿರುವ ಮನದ ಮಾತು ಕಾರ್ಯಕ್ರಮದ ವಿಡಿಯೊವನ್ನು 46.6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೊ ಭಾರತದ ಯುಟ್ಯೂಬ್ ಟ್ರೆಂಡಿಂಗ್‌ನಲ್ಲಿ 37ನೇ ಸ್ಥಾನದಲ್ಲಿದೆ. 1.82 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೊಗೆ ನೀಡಲಾದ ಇತ್ತೀಚಿನ ಪ್ರತಿಕ್ರಿಯೆಗಳಲ್ಲಿ (ಲೇಟೆಸ್ಟ್ ಕಾಮೆಂಟ್ಸ್) ಬಹುತೇಕವು, ಮನದ ಮಾತು ಕಾರ್ಯಕ್ರಮದ ವಿರುದ್ಧ ಇವೆ.ಪ್ರತಿಕ್ರಿಯೆ ನೀಡಿದವರಲ್ಲಿ ಹಲವರು, ಜನರಿಗೆ ಉಪಯೋಗವಾಗುವ ಮಾತುಗಳನ್ನು ಆಡಿ ಎಂಬರ್ಥದ ಮಾತುಗಳನ್ನಾಡಿದ್ದಾರೆ. ಹಲವರು ಎಷ್ಟು ಡಿಸ್‌ಲೈಕ್ ಬಂದಿದೆ ಎಂಬುದನ್ನು ನೋಡಲು ಬಂದಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಪೋಸ್ಟ್‌ಗೆ ಹೆಚ್ಚಿನ ಸಂಖ್ಯೆಯ ಡಿಸ್‌ಲೈಕ್‌ಗಳು ಬಂದಿರುವುದರ ಸ್ಕ್ರೀನ್‌ಶಾಟ್‌ಗಳನ್ನು ಹಲವರು ಟ್ವಿಟರ್, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಪ್ರಕಟಿಸಿದ್ದಾರೆ. ಇವು ವೈರಲ್ ಆಗಿದ್ದು, ಲಕ್ಷಾಂತರ ಬಾರಿ ಹಂಚಿಕೆಯಾಗಿವೆ. ‘ಮೋದಿಯ ಜನಪ್ರಿಯತೆ ಕುಸಿಯುತ್ತಿದೆ. ಹೀಗಾಗಿಯೇ ಲಕ್ಷಗಟ್ಟಲೆ ಡಿಸ್‌ಲೈಕ್ ಬರುತ್ತಿವೆ’ ಎಂದು ಹಲವರು ತಮ್ಮ ಪೋಸ್ಟ್‌ಗಳಲ್ಲಿ ಬರೆದುಕೊಂಡಿದ್ದಾರೆ.

ಆಗಸ್ಟ್ 27ರ ನಂತರ ಈ ವಾಹಿನಿಯಲ್ಲಿ ಪ್ರಧಾನಿ ಮೋದಿ ಅವರ ಭಾಷಣ ಇರುವ ಹಲವು ವಿಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಈ ಎಲ್ಲಾ ವಿಡಿಯೊಗಳಿಗೆ ಲಭ್ಯವಾಗಿರುವ ‘ಲೈಕ್’ಗಳಿಗಿಂತ, ‘ಡಿಸ್‌ಲೈಕ್’ಗಳ ಸಂಖ್ಯೆ ಹಲವು ಪಟ್ಟು ಹೆಚ್ಚು. ಈ ವಿಡಿಯೊಗಳಿಗೆ ಡಿಸ್‌ಲೈಕ್ ಬಂದಿರುವ ಸ್ಕ್ರೀನ್‌ಶಾಟ್‌ಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಡಿಸ್‌ಲೈಕ್‌ಗಳು ಡಿಲೀಟ್

ಈ ವಿಡಿಯೊಗೆ ಬರುತ್ತಿರುವ ಡಿಸ್‌ಲೈಕ್‌ಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

‘ಪ್ರಜಾವಾಣಿ’ ಇದನ್ನು ಪರಿಶೀಲಿಸಿದಾಗ, ಡಿಸ್‌ಲೈಕ್‌ಗಳನ್ನು ಡಿಲೀಟ್ ಮಾಡುತ್ತಿರುವುದು ಪತ್ತೆಯಾಯಿತು.ಮಂಗಳವಾರ ಸಂಜೆ 6.30ರಲ್ಲಿ ಪರಿಶೀಲಿಸಿದಾಗ ಈ ವಿಡಿಯೊಗೆ ವ್ಯಕ್ತವಾಗಿದ್ದ ಡಿಸ್‌ಲೈಕ್‌ಗಳ ಸಂಖ್ಯೆ 9.92 ಲಕ್ಷದಷ್ಟು ಇತ್ತು. 7 ಗಂಟೆಯಲ್ಲಿ 9.98 ಲಕ್ಷದಷ್ಟು ಇತ್ತು. 8 ಗಂಟೆಯಲ್ಲಿ ಪರಿಶೀಲಿಸಿದಾಗ ಡಿಸ್‌ಲೈಕ್‌ಗಳ ಸಂಖ್ಯೆ 9.3 ಲಕ್ಷಕ್ಕೆ ಕುಸಿದಿತ್ತು.

ಡಿಸ್‌ಲೈಕ್‌ಗಳು ಡಿಲೀಟ್ ಆಗುತ್ತಿರುವುದರ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದಾರೆ. ‘ಮೋದಿ ಅವರು ಜನರ ನಿಜವಾದ ಪ್ರತಿಕ್ರಿಯೆಯನ್ನು ಎದುರಿಸಲು ಹೆದರುತ್ತಿದ್ದಾರೆ’ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

‘ಯುಟ್ಯೂಬ್ ಈಗ ಮೋದಿಯ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ಹಲವರು ಆರೋಪಿಸಿದ್ದಾರೆ.

‘ಪ್ರತಿಕ್ರಿಯೆಗೆ ಅವಕಾಶ ನೀಡಿ’

ಮನದ ಮಾತು ಕಾರ್ಯಕ್ರಮದ ವಿಡಿಯೊಗೆ ಹೆಚ್ಚು ಡಿಸ್‌ಲೈಕ್‌ಗಳು ಬಂದ ನಂತರ ಪೋಸ್ಟ್ ಮಾಡಲಾದ ಹಲವು ವಿಡಿಯೊಗಳಿಗೆ ಪ್ರತಿಕ್ರಿಯೆ ನೀಡುವ ಆಯ್ಕೆಯನ್ನು ನಿಷ್ಕ್ರಿಯ ಮಾಡಲಾಗಿದೆ. ಇದಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

‘ಸರ್ಕಾರದ ವಿರುದ್ಧ ಟೀಕೆಗಳು ಬರಬೇಕು. ಟೀಕೆಗಳಿಂದ ಪ್ರಜಾಪ್ರಭುತ್ವದ ಬಲ ಹೆಚ್ಚುತ್ತದೆ’ ಎಂದು 2018ರ ಏಪ್ರಿಲ್ 18ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಟ್ವೀಟ್ ಅನ್ನು ಹಲವರು ಹಂಚಿಕೊಂಡಿದ್ದಾರೆ. ‘ಪ್ರಧಾನಿಯವರೇ ಟೀಕೆ ಮಾಡಲು ಅವಕಾಶ ನೀಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಟ್ವಿಟರ್, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗಿದೆ. ‘ಪ್ರಜಾಪ್ರಭುತ್ವ ಉತ್ತುಂಗದಲ್ಲಿದೆ’ ಎಂದು ಹಲವರು ಹೇಳಿದ್ದಾರೆ.

ವಿಡಿಯೊವನ್ನು ಡಿಸ್‌ಲೈಕ್ ಮಾಡಿದವರ ಸಂಖ್ಯೆ ಮಂಗಳವಾರ ಸಂಜೆ 7.23ರಲ್ಲಿ 9.92 ಲಕ್ಷದಷ್ಟು ಇತ್ತು

ಪ್ರತಿಕ್ರಿಯೆಗಳು

ಮೋದಿಜೀ ನಿರುದ್ಯೋಗ, ಶಿಕ್ಷಣ, ಜಿಡಿಪಿ, ಬಡತನ, ಖಾಸಗೀಕರಣ, ಚೀನಾ, ಪಿಎಂಕೇರ್ಸ್ ನಿಧಿ ಮತ್ತು ಕೋವಿಡ್ ಹಾವಳಿ ಬಗ್ಗೆ ಮಾತನಾಡಿ –NON Copyrights Videos

ಮೋದೀಜೀ ನೀವುಬರೀ ನಿಮ್ಮ ಮನದ ಮಾತುಗಳನ್ನು ಆಡುತ್ತಿದ್ದಿರಿ. ಕನಿಷ್ಠಪಕ್ಷ ನಿರುದ್ಯೋಗಿಗಳ ಮನದ ಮಾತನ್ನು ಕೇಳಿಸಿಕೊಳ್ಳಿ –ARVIND PRAJAPATI

ನಾನು ನನ್ನ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡಿದ್ದೇನೆ. ಈ ಮನದ ಮಾತಿಗೆ ‘ಡಿಸ್‌ಲೈಕ್’ ಒತ್ತಿದ್ದೇನೆ –Kedar verma

ಮೋದಿ ಅವರು ಕೋವಿಡ್ ಬಗ್ಗೆ ಮಾತನಾಡಬೇಕಿತ್ತು. ಆದರೆ ಆಟಿಕೆಗಳು ಮತ್ತು ನಾಯಿಗಳ ಬಗ್ಗೆ ಮಾತನಾಡುತ್ತಿದ್ದಾರೆ –jai K

ಆರ್‌ಐಪಿ ಬಿಜೆಪಿ. ನಮ್ಮ ಪ್ರಧಾನಿ ‘ಮೂರ್ಖರ ಸ್ವರ್ಗ’ದಲ್ಲಿ ಜೀವಿಸುತ್ತಿದ್ದಾರೆ. ಕೇವಲ ಮಾತುಗಳು ವಾಸ್ತವವನ್ನು ಬದಲಿಸಲಾರವು –harender sekhon

ಕ್ಷಮಿಸಿ ಸರ್, ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ನೀವು ವಿಫಲರಾಗಿದ್ದೀರಿ –Mr.Yogesh

ಪ್ರಜಾಪ್ರಭುತ್ವದಲ್ಲಿ ಪ್ರಬಲ ವಿರೋಧ ಪಕ್ಷ ಏಕೆ ಇರಬೇಕು ಎಂಬುದು ನನಗೆ ಈಗ ಅರ್ಥವಾಗುತ್ತಿದೆ –Manish Raj

ನಿಮ್ಮ ಮನದ ಮಾತನ್ನು ನಾವು ಕೇಳುವುದಿಲ್ಲ. ಮೊದಲು ಎಸ್‌ಎಸ್‌ಸಿ, ಆರ್‌ಆರ್‌ಬಿ, ಎನ್‌ಟಿಪಿಸಿ ಪರೀಕ್ಷೆಗಳ ಫಲಿತಾಂಶ ಘೋಷಿಸಿ –Mafuj alam

ಡಿಸ್‌ಲೈಕ್‌ಗಳ ಸಂಖ್ಯೆ ಎಷ್ಟಾಯಿತು ಎಂದು ಪರಿಶೀಲಿಸಲು ಮತ್ತೆ ಮತ್ತೆ ಬರುತ್ತಿರುವವರು ಯಾರು? –Nithin Shenoy

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.