ಶುಕ್ರವಾರ, ನವೆಂಬರ್ 15, 2019
22 °C

ಫೋನ್‌ ಪೇ ಆ್ಯಪ್‌ನಲ್ಲಿ ಮರಳಿ ಬಂತು 'ಕನ್ನಡ'

Published:
Updated:

ಬೆಂಗಳೂರು: ಮೊಬೈಲ್ ವಾಲೆಟ್ ಫೋನ್ ಪೇ ಆ್ಯಪ್‌ನಲ್ಲಿ ಮಂಗಳವಾರ ಕೆಲವು ಗಂಟೆಗಳ ಕಾಲ ಭಾಷಾ ಆಯ್ಕೆ ಪಟ್ಟಿಯಲ್ಲಿ ಕನ್ನಡ ಮಾಯವಾಗಿತ್ತು. ಆ್ಯಪ್‌ನಲ್ಲಿ ಕನ್ನಡ ಯಾಕೆ ತೆಗೆದುಹಾಕಿದ್ದೀರಿ ಎಂದು ನೆಟ್ಟಿಗರು ಫೋನ್‌ ಪೇ ಅನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: ಫೋನ್‌ ಪೇ ಆ್ಯಪ್‌ನಲ್ಲಿ 'ಕನ್ನಡ' ಮಾಯ  

ಈ ಹಿಂದೆ ಫೋನ್ ‌ಪೇಯಲ್ಲಿ ಕನ್ನಡ ಭಾಷೆ ಆಯ್ಕೆ ಇತ್ತು. ಆ್ಯಪ್ ಅಪ್‌ಡೇಟ್ ಆದ ನಂತರ ಅದರಲ್ಲಿ ಕನ್ನಡ ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಕೆಲವೊಂದು ಭಾಷೆಗಳನ್ನು ಆ್ಯಪ್ ಸಪೋರ್ಟ್ ಮಾಡುತ್ತಿಲ್ಲ ಎಂದು ಫೋನ್ ಪೇ ಟ್ವೀಟಿಸಿತ್ತು.

ಇದೀಗ ಫೋನ್ ಪೇಯಲ್ಲಿ ಮತ್ತೆ ಕನ್ನಡ ಭಾಷೆ ಆಯ್ಕೆ ಮರಳಿದ್ದು, ಆ್ಯಪ್ ಬಳಕೆದಾರರು ನಿರಾಳರಾಗಿದ್ದಾರೆ.

ಪ್ರತಿಕ್ರಿಯಿಸಿ (+)