ಶನಿವಾರ, ಆಗಸ್ಟ್ 13, 2022
25 °C

ವಿಡಿಯೊ ನೋಡಿ: ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಬೂಟಿನಿಂದ ಹೊಡೆದ ಪ್ರಾಂಶುಪಾಲ!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖಿಂಪುರ ಖೇರಿ: ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಪ್ರಾಂಶುಪಾಲ ಬೂಟಿನಿಂದ ಹೊಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಖಿಂಪುರ ಖೇರಿ ಜಿಲ್ಲೆಯ ಮಹಂಗು ಖೇರಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕೆ ಪ್ರಾಂಶುಪಾಲ ಶಿಕ್ಷಕಿಗೆ ಬೂಟಿನಿಂದ ಹೊಡೆದಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ಶಿಕ್ಷಕಿ ಶಾಲೆಗೆ ತಡವಾಗಿ ಬಂದಿದ್ದರಿಂದ ಕುಪಿತಗೊಂಡ ಪ್ರಾಂಶುಪಾಲ ಶೂಗಳಿಂದ ಅವರನ್ನು ಥಳಿಸಿದ್ದಾರೆ. 20 ಸೆಕೆಂಡುಗಳ ಈ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಈ ಘಟನೆ ಕುರಿತು ಪ್ರಾಂಶಪಾಲರ ಮೇಲೆ ಶಿಕ್ಷಕಿ ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಾಂಶುಪಾಲನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು