ಭಾನುವಾರ, ಮಾರ್ಚ್ 7, 2021
32 °C

Signal App: ಹೊಸ ಬಳಕೆದಾರರ ಸೇರ್ಪಡೆಯಿಂದ ಸಮಸ್ಯೆಗೆ ಸಿಲುಕಿದ ಸಿಗ್ನಲ್ ಆ್ಯಪ್!

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

The Signal messaging app logo. Credit: Reuters File Photo

ಬೆಂಗಳೂರು: ವಾಟ್ಸ್ ಆ್ಯಪ್ ಖಾಸಗಿತನ ನೀತಿಯ ಹೊಸ ಅಪ್‌ಡೇಟ್ ಬಳಕೆದಾರರಿಗೆ ಇನ್ನೂ ಗೊಂದಲ ಮೂಡಿಸುತ್ತಿರುವ ಬೆನ್ನಲ್ಲೇ ಜನಪ್ರಿಯತೆ ಪಡೆದುಕೊಂಡ ಸಿಗ್ನಲ್ ಆ್ಯಪ್, ತಾಂತ್ರಿಕ ಸಮಸ್ಯೆಗೆ ಸಿಲುಕಿದ್ದು, ಕ್ಷಣಕಾಲ ಕಾರ್ಯ ಸ್ಥಗಿತಗೊಳಿಸಿತ್ತು. ಅದಾದ ಬಳಿಕ ಮತ್ತೆ ಮರಳಿ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಹೊಸ ಬಳಕೆದಾರರಿಂದ ಸಿಗ್ನಲ್ ಇನ್‌ಸ್ಟಾಲ್

ವಾಟ್ಸ್ ಆ್ಯಪ್ ಸುರಕ್ಷತೆ ಕುರಿತು ಗೊಂದಲ ಉಂಟಾಗಿದ್ದು ಮತ್ತು ಟೆಸ್ಲಾ ಎಲೊನ್ ಮಸ್ಕ್ ಸಿಗ್ನಲ್ ಆ್ಯಪ್ ಅನ್ನು ಬೆಂಬಲಿಸಿದ್ದ ಬೆನ್ನಲ್ಲೇ, ಅತಿಹೆಚ್ಚಿನ ಸಂಖ್ಯೆಯ ಬಳಕೆದಾರರು ವಾಟ್ಸ್ ಆ್ಯಪ್ ತೊರೆದು ಸಿಗ್ನಲ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಬಳಸಲು ಮುಂದಾಗಿದ್ದಾರೆ. ಒಮ್ಮೆಲೆ ಗರಿಷ್ಠ ಸಂಖ್ಯೆಯ ಬಳಕೆದಾರರು ಸಿಗ್ನಲ್ ಆ್ಯಪ್ ಬಳಸಲು ಆರಂಭಿಸಿದ್ದರಿಂದ, ಸರ್ವರ್ ಸಮಸ್ಯೆಯಾಗಿದೆ.

ಮೆಸೇಜ್ ಎರರ್

ಸರ್ವರ್ ಮಿತಿಮೀರಿದ ಲೋಡ್‌ನಿಂದಾಗಿ ಸಿಗ್ನಲ್ ಆ್ಯಪ್ ಬಳಕೆದಾರರಿಗೆ ಮೆಸೇಜ್ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಆ ಸಮಸ್ಯೆಯಯನ್ನು ಸರಿಪಡಿಸಲಾಗಿದ್ದು, ಪ್ರಸ್ತುತ ಸಿಗ್ನಲ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಸಿಗ್ನಲ್ ಟ್ವೀಟ್ ಮಾಡಿದೆ. ಹೊಸ ಅಪ್‌ಡೇಟ್‌ನೊಂದಿಗೆ ಎರರ್ ಮೆಸೇಜ್ ಸಮಸ್ಯೆ ಸರಿಪಡಿಸಲಾಗುತ್ತಿದೆ. ಅಲ್ಲದೆ, ಬಳಕೆದಾರರ ಚಾಟ್ ಸುರಕ್ಷತೆಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.