ಬುಧವಾರ, ಏಪ್ರಿಲ್ 14, 2021
28 °C

ಸಿಗರೇಟು ಸೇದಿದ ಪ್ರಿಯಾಂಕಾ; ಈಗ ಅಸ್ತಮಾ ಎಲ್ಲಿ ಹೋಯ್ತು? ಎಂದ ನೆಟ್ಟಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ನನಗೆ ಅಸ್ತಮಾ ಇದೆ. ಹಾಗಾಗಿ ಈ ದೀಪಾವಳಿ ಪಟಾಕಿ ಸಿಡಿಮದ್ದುಗಳಿಂದ ದೂರವಿರಿ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯವಾಗುತ್ತದೆ ಎಂದು ಉಪದೇಶ ನೀಡಿದ್ದರು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ.

ಆದರೆ ಜುಲೈ18ರಂದು ತನ್ನ ಹುಟ್ಟುಹಬ್ಬ ಆಚರಿಸಿಕೊಂಡ ಈಕೆ, ಪತಿ ನಿಕ್ ಜೋನಸ್ ಮತ್ತು ತನ್ನ ತಾಯಿ ಮಧು ಚೋಪ್ರಾ ಜತೆ ಹಾಯಿದೋಣಿಯಲ್ಲಿ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಸ್ತಮಾ ಇರುವ ಪ್ರಿಯಾಂಕಾ, ದೀಪಾವಳಿ ಹಬ್ಬಕ್ಕೆ ಪಟಾಕಿಯಿಂದ ದೂರವಿರಿ ಎಂದಿದ್ದರು. ಹಾಗಾದರೆ ಸಿಗರೇಟಿನಿಂದ ಅಸ್ತಮಾ ಸಮಸ್ಯೆ ಬರುವುದಿಲ್ಲವೇ ಎಂದು ನೆಟ್ಟಿಗರು ಪ್ರಿಯಾಂಕಾಳನ್ನು ಟೀಕಿಸಿದ್ದಾರೆ.

ಕಳೆದ ವರ್ಷ ಅಸ್ತಮಾ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಮತ್ತು ಅಸ್ತಮಾಕ್ಕಿರುವ ಇನ್ಹೇಲರ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ನನಗೆ ಅಸ್ತಮಾ ಇದೆ ಎಂದು. ನಾನಿದನ್ನು ಮುಚ್ಚಿಡುವುದೇತಕೆ? ಅಸ್ತಮಾ ನನ್ನನ್ನು ನಿಯಂತ್ರಿಸುವ ಮುನ್ನ ನಾನು ಅದನ್ನು ನಿಯಂತ್ರಿಸಬೇಕಿತ್ತು. ನನ್ನ ಇನ್ಹೇಲರ್ ಇರುವಲ್ಲಿವರೆಗೆ ನನ್ನ ಗುರಿ ಸಾಧನೆಯನ್ನು ಅಸ್ತಮಾ ಅಡ್ಡಿಪಡಿಸುವುದಿಲ್ಲ ಎಂದು ಟ್ವೀಟಿಸಿದ್ದರು.

ಹೀಗೆ ಟ್ವೀಟಿಸಿದ್ದ ಪ್ರಿಯಾಂಕಾ ಕಳೆದ ವರ್ಷ ತನ್ನ ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸಿದ್ದಕ್ಕೂ ನೆಟ್ಟಿಗರು ಟೀಕಿಸಿದ್ದರು. ಇದೀಗ ಸಿಗರೇಟು ಸೇದುತ್ತಿರುವ ಫೋಟೊ ಬಗ್ಗೆ ಟೀಕಿಸಿದ ನೆಟ್ಟಿಗರು, ಇಷ್ಟೊಂದು ನಾಟಕ ಯಾಕೆ ಎಂದು ಕೇಳಿದ್ದಾರೆ. ಇನ್ನು ಕೆಲವರು ಪ್ರಿಯಾಂಕಾ ಬೂಟಾಟಿಕೆ ಮಾಡುತ್ತಿದ್ದಾರೆ ಎಂದು ಟ್ವೀಟಿಸಿದ್ದಾರೆ.

ದೀಪಾವಳಿ ಬಂದಾಗ ಮಾತ್ರ ಬರುವ ಅಸ್ತಮಾ ಎಂತದ್ದು ಎಂದು ಟ್ವೀಟಿಗರೊಬ್ಬರು ಪ್ರಶ್ನಿಸಿದ್ದು, ಸಿಗರೇಟು ಸೇದುವ ಮೂಲಕ ಪ್ರಿಯಾಂಕಾ ಅಸ್ತಮಾ ಗುಣಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಿಕ್ ಜತೆ ಹುಟ್ಟುಹಬ್ಬ ಆಚರಿಸುತ್ತಿರುವ ಪ್ರಿಯಾಂಕಾ ಫೋಟೊವನ್ನು ಕೂಡಾ ಟ್ವೀಟಿಗರು ಟ್ರೋಲ್ ಮಾಡಿದ್ದಾರೆ. ಸ್ಪಾರ್ಕ್ಲಿಂಗ್ ಕ್ಯಾಂಡಲ್‌ನ್ನು ಊದುತ್ತಿರುವ ಪೆದ್ದು ಎಂದು ಪ್ರಿಯಾಂಕಾಳ ಬಗ್ಗೆ ನೆಟ್ಟಿಗರು ಲೇವಡಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು