ಶಿಲ್ಪಾ ಶೆಟ್ಟಿ ಮನೆ ವೈಭವ: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್

ಬಳಕುವ ಸೊಂಟ, ನೀಳವಾದ ಕಾಲು, ಬೊಜ್ಜು ರಹಿತ ದೇಹ ಹೀಗೆ ತಮ್ಮ ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನ ನೀಡುತ್ತಾ ಬಂದಿರುವ ಶಿಲ್ಪಾ ಶೆಟ್ಟಿ ಅವರು ಯೋಗಾಸನ ಮಾಡುತ್ತಿರುವ ಹಲವಾರು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಇದರಲ್ಲಿ ಅವರ ಮನೆಯೊಳಗಿನ ಅದ್ಭುತ ಶೋಪೀಸ್ ಇರುವ ಅಂಗಳ, ಹಸಿರು ತುಂಬಿದ ಸುಂದರ ಉದ್ಯಾನ ಅಭಿಮಾನಿಗಳ ಮೆಚ್ಚುಗೆ ಪಡೆದಿವೆ.
ಈ ಮಂಗಳೂರಿನ ಸುಂದರಿಯ ಮನೆಯ ಹೆಸರು ’ಕಿನಾರ‘, ಹದವಾದ ಬಣ್ಣ ಹೊದ್ದ ಗೋಡೆಗಳಿದ್ದು, ದುಬಾರಿ ಶೋಪೀಸ್‌ಗಳು ಗೋಡೆ, ಕೊಠಡಿಯನ್ನು ಅಲಂಕರಿಸಿವೆ. ಮನೆಯ ಪ್ರತಿ ಸ್ಥಳವನ್ನು ಜಾಗರೂಕತೆಯಿಂದ ಶೃಂಗರಿಸಲಾಗಿದೆ.
ಶಿಲ್ಪಾ ಶೆಟ್ಟಿ ಯೋಗಾಸನದ ಜತೆಗೆ ತನ್ನ ಆಹಾರ ಕ್ರಮದ ಬಗ್ಗೆ ಕೂಡ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಹೀಗಾಗಿ ಅವರು ಇಂದಿಗೂ ಬೇರೆ ನಟಿಯರಿಗಿಂತ ಭಿನ್ನವಾಗಿದ್ದಾರೆ. ಹೆಚ್ಚಾಗಿ ನಟಿಯರು ಸಿನಿಮಾದಲ್ಲಿ ಬೇಡಿಕೆ ಕಡಿಮೆ ಆದ ಬಳಿಕ ಫಿಟ್‌ನೆಸ್ ಕಡೆಗೆ ಗಮನಹರಿಸಲ್ಲ. ಆದರೆ ಶಿಲ್ಪಾ ಶೆಟ್ಟಿ ಮಾತ್ರ ಇವರೆಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ.
’ದಿ ಶಿಲ್ಪಾ ಶೆಟ್ಟಿ ಚಾನೆಲ್ ಎಂಬ ಯುಟ್ಯೂಬ್ ಖಾತೆಯಲ್ಲಿ ’ಆರ್ಟ್ ಆಫ್ ಲವ್ ಆ್ಯಂಡ್ ಫುಡ್‘ ಎಂಬ ಹೆಸರಿನಲ್ಲಿ ಅಡುಗೆ ವಿಡಿಯೊಗಳನ್ನು ಮಾಡಿ ಹಂಚಿಕೊಳ್ಳುತ್ತಾರೆ. ಇಲ್ಲೂ ಅವರ ಅಡುಗೆ ಮನೆಯ ವೈಭವನ್ನು ಕಣ್ತುಂಬಿಕೊಳ್ಳಬಹುದು. ಫೈಸ್ಟಾರ್ ಹೋಟೆಲ್‌ಗೂ ಕಡಿಮೆ ಇಲ್ಲದಂತೆ ದೊಡ್ಡದಾದ ಡೈನಿಂಗ್ ಟೇಬಲ್ ಕೂಡ ಇದೆ.
ಉದ್ಯಾನದಲ್ಲಿ ಪುಟ್ಟದೊಂದು ಕೈತೋಟ ಮಾಡಿರುವ ಶಿಲ್ಪಾ. ಮಗ ವಿವಾನ್ ಒಟ್ಟಿಗೆ ತರಕಾರಿ ಕೊಯ್ದು ವಿಡಿಯೊವನ್ನು ಹಂಚಿಕೊಂಡಿದ್ದರು. ಹೀಗೆ ಮನೆ ಒಳಗೆ, ಹೊರ ಆವರಣವನ್ನು ಸಂದರವಾಗಿ ಇಟ್ಟುಕೊಂಡಿದ್ದಾರೆ ಶಿಲ್ಪಾ.
ತಮ್ಮ ಅಭಿಮಾನಿಗಳಿಗೂ ಯೋಗ ಮಾಡಲು ಪ್ರೇರಿಪಿಸುವ ಶಿಲ್ಪಾ, ಪುಟ್ಟಪುಟ್ಟ ವಿಡಿಯೊ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಅವರ ಉದ್ಯಾನದ ಶಾಂತ ವಾತಾವರಣ, ಹಕ್ಕಿಗಳ ಚಿಲಿಪಿಲಿ ನೋಡಿ ನಾವು ಯೋಗ ಮಾಡಬೇಕೆನಿಸುವುದು ಸುಳ್ಳಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.