ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇರ್‌ ಆ್ಯಂಡ್‌‌ ಲವ್ಲಿಯಿಂದ ‘ಫೇರ್‌’ ಕಟ್‌, ಹ್ಯಾಂಡ್ಸಮ್‌ ಬಗ್ಗೆ ಏನು?

Last Updated 26 ಜೂನ್ 2020, 3:24 IST
ಅಕ್ಷರ ಗಾತ್ರ

ನವದೆಹಲಿ: ಹಿಂದುಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌(ಎಚ್‌ಯುಎಲ್‌) ತನ್ನ ಜನಪ್ರಿಯ ಬ್ರ್ಯಾಂಡ್‌ ‘ಫೇರ್‌ ಆ್ಯಂಡ್‌ ಲವ್ಲಿ’ಯಿಂದ ‘ಫೇರ್’‌ ಪದದಕೈಬಿಡುವ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ.

ಸದ್ಯ ಹಲವು ರಾಷ್ಟ್ರಗಳಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ‘ಶಾದಿ ಡಾಟ್ ಕಾಮ್’' ಜಾಲತಾಣದಲ್ಲಿ ಬಳಕೆಯಲ್ಲಿದ್ದ ಚರ್ಮ ಸಂಬಂಧಿತ ಪದವನ್ನು ತೆಗೆದು ಹಾಕಲಾಗಿದೆ.ಇದರ ಬೆನ್ನಲೇ ಎಚ್‌ಯುಎಲ್‌ ‘ಫೇರ್’‌ ಪದ ಕೈಬಿಡುವ ತೀರ್ಮಾನಕ್ಕೆ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಬ್ರ್ಯಾಂಡ್‌ ಅನ್ನು ನವೀಕರಣ ಮಾಡುವ ಉದ್ದೇಶದಿಂದ ಕಂಪನಿಯು ಫೇರ್‌ ಪದದಬಳಕೆಯನ್ನು ಕೈಬಿಡುವ ನಿರ್ಧಾರಕ್ಕೆ ಬಂದಿರುವುದಾಗಿ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಫೇರ್‌ ಪದದ ಜೊತೆಗೆ ವೈಟ್ನಿಂಗ್‌ ಹಾಗೂ ಲೈಟ್ನಿಂಗ್‌ ಪದಗಳನ್ನು ಕೈಬಿಟ್ಟು ಮರು ಬ್ರ್ಯಾಂಡಿಂಗ್‌ಗೆ ಚಿಂತನೆ ನಡೆಸಿರುವ ಕಂಪನಿಯ ಕ್ರಮವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಗತಿಸಿದ್ದಾರೆ. ಪದ ಕೈಬಿಡುವಿಕೆಯು ಉತ್ವನ್ನದ ಮೂಲ ಉದ್ದೇಶವನ್ನು ಹೇಗೆ ಬದಲಾಯಿಸುತ್ತದೆ ಎಂದು ಹಲವರು ಪ್ರಶ್ನಿಸಿದ್ದಾರೆ.

‘ಫೇರ್‌ ಆ್ಯಂಡ್‌ ಲವ್ಲಿಯಿಂದ ‘ಫೇರ್‌’ ಅನ್ನು ಕೈಬಿಡುವ ಮೂಲಕ ಎಚ್‌ಯುಎಲ್‌ ವರ್ಣಬೇಧ ನೀತಿ ವಿರುದ್ಧ ಹೋರಾಡುತ್ತಿದೆ. ಆದರೆ, ಉತ್ವನ್ನ ಮಾರಾಟ ಮಾಡುವುದನ್ನು ಮುಂದುವರಿಸಿದೆ’ ಎಂದು ಸಾಗರ ಎಂಬುವರು ಟ್ವೀಟ್‌ ಮಾಡಿದ್ದಾರೆ.

ಫೇರ್‌ ಆ್ಯಂಡ್‌ ಲವ್ಲಿ ಇದೀಗ ‘ಲವ್ಲಿ’ ಆಗುತ್ತಿರುವುದು ಒಳ್ಳೆಯದು. ಆದರೆ, ಫೇರ್‌ ಆ್ಯಂಡ್‌ ಹ್ಯಾಂಡ್ಸಮ್‌ ಬಗ್ಗೆ ಏನು? ಎಂದು ರಾಜೇಶ್‌ ಸಾಹ್ನಿ ಪ್ರಶ್ನಿಸಿದ್ದಾರೆ.

**

**

**

**

***

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT