ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಗೆ ಅಡ್ಡಿಪಡಿಸಲು ಹೇಳಿಕೆ ರೂಪಿಸಿದ ಟ್ವಿಟರ್‌: ದೆಹಲಿ ಪೊಲೀಸರು

Last Updated 27 ಮೇ 2021, 15:23 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಟ್ವಿಟರ್‌ ಕಚೇರಿಗೆ ಪೊಲೀಸರು ಭೇಟಿ ನೀಡಿದ್ದನ್ನು 'ಬೆದರಿಕೆಯೊಡ್ಡುವ ತಂತ್ರ' ಎಂದು ಹೇಳಿಕೆ ನೀಡಿರುವ ಟ್ವಿಟರ್‌ಗೆ ದೆಹಲಿ ಪೊಲೀಸರು ತಿರುಗೇಟು ನೀಡಿದ್ದಾರೆ. ‘ಇದು ಕಾನೂನುಬದ್ಧ ವಿಚಾರಣೆಗೆ ಅಡ್ಡಿಯುಂಟು ಮಾಡಲು ವಿನ್ಯಾಸಗೊಳಿಸಲಾದ ಹೇಳಿಕೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟ್ವೀಟ್‌ಗೆ ‘ತಿರುಚಲಾದ ಮಾಹಿತಿ’ ಎಂದು ಟ್ಯಾಗ್ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ಸಂಸ್ಥೆಯ ಭಾರತದ ಎಂಡಿಗೆ ನೋಟಿಸ್ ನೀಡಲು ಪೊಲೀಸರು ಇತ್ತೀಚೆಗೆ ಟ್ವಿಟರ್ ಕಚೇರಿಗೆ ತೆರಳಿದ್ದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಟ್ವಿಟರ್‌ ಭಾರತದಲ್ಲಿನ ಸಿಬ್ಬಂದಿ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿತ್ತು. 'ದೆಹಲಿ ಪೊಲೀಸರು ಬೆದರಿಕೆಯೊಡ್ಡುವ ತಂತ್ರ ಬಳಸಿದ್ದಾರೆ' ಎಂದು ಹೇಳಿತ್ತು.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, 'ಇದು ಕಾನೂನುಬದ್ಧ ವಿಚಾರಣೆಗೆ ಅಡ್ಡಿಯುಂಟು ಮಾಡಲು ವಿನ್ಯಾಸಗೊಳಿಸಲಾದ ಹೇಳಿಕೆಯಾಗಿದೆ. ಜನರ ಸಹಾನುಭೂತಿಯನ್ನು ಗಳಿಸಲು ಇದನ್ನು ರೂಪಿಸಲಾಗಿದೆ' ಎಂದು ತಿಳಿಸಿದ್ದಾರೆ.

'ಟ್ವಿಟರ್ ಹೇಳಿಕೆಗಳನ್ನು ಪತ್ರಿಕಾ ವರದಿಗಳಲ್ಲಿ ನೋಡಿದ್ದೇವೆ. ಈ ಹೇಳಿಕೆಗಳು ಸುಳ್ಳಿನಿಂದ ಕೂಡಿವೆ. ಕಾನೂನುಬದ್ಧ ವಿಚಾರಣೆಗೆ ಖಾಸಗಿ ಮಾಧ್ಯಮವೊಂದು ಅಡ್ಡಿಯುಂಟು ಮಾಡುವ ಯೋಜನೆ ಇದಾಗಿದೆ' ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

'ಟ್ವಿಟರ್ ಸಾರ್ವಜನಿಕ ವೇದಿಕೆಯಾಗಿದೆ. ಅದು ತನ್ನ ಕಾರ್ಯಚಟುವಟಿಕೆಯಲ್ಲಿ ಪಾರದರ್ಶಕತೆ ಪ್ರದರ್ಶಿಸಲು ಮುಂದಾಗಬೇಕು. ಸಾರ್ವಜನಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸ್ಪಷ್ಟತೆಯನ್ನು ತರಬೇಕು' ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಸೂಚಿಸಿದ ಟ್ವಿಟರ್ ಖಾತೆಗಳನ್ನು ಮತ್ತು ಕಂಟೆಂಟ್‌ಗಳನ್ನು ನಿರ್ಬಂಧಿಸುವ ವಿಚಾರವಾಗಿ ಈ ವರ್ಷ ಜನವರಿ–ಫೆಬ್ರುವರಿಯಿಂದ ಸರ್ಕಾರ ಮತ್ತು ಟ್ವಿಟರ್‌ ನಡುವೆ ತಿಕ್ಕಾಟ ಶುರುವಾಗಿದೆ. ಕಂಟೆಂಟ್‌ ನಿರ್ಬಂಧಿಸಲು ಟ್ವಿಟರ್ ನಿಧಾನಗತಿಯ ಧೋರಣೆ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿತ್ತು. ಆದರೆ, ಟ್ವಿಟರ್‌ 'ವಾಕ್‌ ಸ್ವಾತಂತ್ರ್ಯದ' ಕಾರಣ ನೀಡಿ ಸಮರ್ಥಿಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT