ಬುಧವಾರ, ಸೆಪ್ಟೆಂಬರ್ 22, 2021
21 °C

ಟೆಲಿಗ್ರಾಂ ಹೊಸ ಅಪ್‌ಡೇಟ್: ವಿಡಿಯೊ ಕರೆಯಲ್ಲಿ 1000 ಮಂದಿಗೆ ಅವಕಾಶ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

The Telegram logo (Reuters Photo)

ಬೆಂಗಳೂರು: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಂ, ಹೊಸ ಅಪ್‌ಡೇಟ್ ಬಿಡುಗಡೆ ಮಾಡಿದೆ. ಗ್ರೂಪ್ ವಿಡಿಯೊ ಕರೆಗಳಲ್ಲಿ 1000 ಮಂದಿ ಭಾಗವಹಿಸುವ ಅವಕಾಶವನ್ನು ಟೆಲಿಗ್ರಾಂ ಬಳಕೆದಾರರಿಗೆ ಕಲ್ಪಿಸುತ್ತಿದೆ.

ಹೊಸ ಅಪ್‌ಡೇಟ್ ಪ್ರಕಾರ, ವಿಡಿಯೊ ಕರೆಯಲ್ಲಿ 30 ಜನರು ಮಾತುಕತೆ ನಡೆಸಬಹುದು, ಆದರೆ ಅದೇ ಕರೆಯನ್ನು 1000 ಮಂದಿ ವೀಕ್ಷಿಸಲು ಅವಕಾಶವಿದೆ. ಜತೆಗೆ ವಿಡಿಯೊ ಮೆಸೇಜ್ ಅನ್ನು ರೆಕಾರ್ಡ್ ಮಾಡಲು ಕೂಡ ಸಾಧ್ಯವಿದೆ.

ಜತೆಗೆ ಸ್ಕ್ರೀನ್ ಶೇರಿಂಗ್ ಆಯ್ಕೆ ಹೊಸ ಗ್ರೂಪ್ ವಿಡಿಯೊ ಕಾಲ್ಸ್ 2.0 ಮೂಲಕ ಲಭ್ಯವಿದೆ.

ವಿಡಿಯೊ ಕರೆಯಲ್ಲಿ ಗರಿಷ್ಠ ರೆಸೊಲ್ಯೂಷನ್ ಇದ್ದು, ರೆಕಾರ್ಡ್ ಮಾಡಿದಾಗಲೂ ಅದೇ ಸ್ಪಷ್ಟತೆ ಲಭ್ಯವಾಗಲಿದೆ.

ಜತೆಗೆ ಟೆಲಿಗ್ರಾಂ ಆ್ಯಪ್‌ನಲ್ಲಿರುವ ಮಿಡಿಯಾ ಎಡಿಟರ್ ಮೂಲಕ ಬಳಕೆದಾರರು ಫೋಟೊ ಮತ್ತು ವಿಡಿಯೊಗಳಿಗೆ ಚಿತ್ರ, ಸ್ಟಿಕರ್ಸ್ ಮತ್ತು ಟೆಕ್ಸ್ಟ್ ಹಾಕುವ ಮೂಲಕ ಅಲಂಕರಿಸಲು ಅನುವು ಮಾಡಿಕೊಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು