ವಾಷಿಂಗ್ಟನ್: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಸೊಸೆ ವನೆಸಾ ಜೊತೆ ಸಂಬಂಧ ಹೊಂದಿದ್ದೇನೆ’ ಎಂದು ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರು ಖಚಿತಪಡಿಸಿದ್ದಾರೆ.

'ಪ್ರೀತಿಯು ಗಾಳಿಯಲ್ಲಿದೆ’ ಎಂದು ಶೀರ್ಷಿಕೆ ಬರೆದು, ವನೆಸಾ ಜೊತೆಗಿರುವ ಎರಡು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಅಪ್ಲೋಡ್ ಮಾಡಿದ್ದಾರೆ.

ಸ್ಯಾನ್ ಡಿಯಾಗೊದಲ್ಲಿ ನಡೆದ ‘ಜ್ಯೂನಿಯರ್ ಟೊರ್ರಿ ಪೈನ್ಸ್’ ಟೂರ್ನ್ಮೆಂಟ್ಗೆ ಟೈಗರ್ ವುಡ್ಸ್ ಮತ್ತು ವನೆಸಾ ಜೊತೆಗೆ ಹಾಜರಾಗಿದ್ದರು.

ವನೆಸಾ ಅವರು ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮಗ ಹಾಗೂ ಉದ್ಯಮಿ ಡೊನಾಲ್ಡ್ ಜಾನ್ ಟ್ರಂಪ್ ಅವರನ್ನು ವರಿಸಿದ್ದರು. 2018ರಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು.

ವನೆಸಾ ಟ್ರಂಪ್ ಅವರಿಗೆ ಕಾಯ್ ಮ್ಯಾಡಿಸನ್ ಟ್ರಂಪ್, ಡೊನಾಲ್ಡ್ ಟ್ರಂಪ್–3 ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಟೈಗರ್ವುಡ್ಸ್ಗೆ ಕೂಡ ಇಬ್ಬರು ಮಕ್ಕಳಿದ್ದಾರೆ. ವನೆಸಾ ಮತ್ತು ವುಡ್ಸ್ ಅವರ ಮಕ್ಕಳು ಬೆಂಜಮಿನ್ ಸ್ಕೂಲ್ನಲ್ಲಿಯೇ ಕಲಿಯುತ್ತಿದ್ದಾರೆ.

ಎಲನ್ ನಾರ್ಡ್ಗ್ರೊನ್ ಅವರನ್ನು ಟೈಗರ್ವುಡ್ಸ್ 2004ರಲ್ಲಿ ಮದುವೆಯಾಗಿದ್ದರು. ಅವರಿಗಿದ್ದ ಅನೈತಿಕ ಸಂಬಂಧವನ್ನು ಪತ್ನಿಯೇ ಬಯಲಿಗೆಳೆದಿದ್ದರು. 2010ರಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.