ಶನಿವಾರ, ನವೆಂಬರ್ 26, 2022
21 °C

ಟ್ವಿಟರ್‌ನಲ್ಲಿ ದ್ವೇಷ ಭಾಷಣ ಕಡಿಮೆಯಾಗಿದೆ: ಇಲಾನ್ ಮಸ್ಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಟ್ವಿಟರ್‌ನಲ್ಲಿ ದ್ವೇಷ ಭಾಷಣ ಗಮನಾರ್ಹವಾಗಿ ಇಳಿಕೆಯಾಗಿದೆ ಎಂದು ಮಾಲೀಕ ಇಲಾನ್‌ ಮಸ್ಕ್‌ ಹೇಳಿದ್ದಾರೆ.

‘ಈ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ, ದ್ವೇಷ ಭಾಷಣ ಪ್ರಕರಣಗಳು ಮೂರನೇ ಒಂದರಷ್ಟು ಕಡಿಮೆಯಾಗಿದೆ. ಟ್ವಿಟರ್‌ ತಂಡಕ್ಕೆ ಅಭಿನಂದನೆಗಳು‘ ಎಂದು ಮಸ್ಕ್ ಟ್ವೀಟ್‌ ಮಾಡಿದ್ದಾರೆ.

‘ದ್ವೇಷ ಭಾಷಣದ ಪೋಸ್ಟ್‌ ಹಾಕಿ ರದ್ದಾಗಿರುವ ಖಾತೆಗಳನ್ನು ಮರುಸ್ಥಾಪಿಸಲು ತನಗೆ ಸಂಪೂರ್ಣ ಒಲವಿಲ್ಲ. ಆದರೂ ಈ ಬಗ್ಗೆ ಚಿಂತನೆ ಮಾಡುತ್ತೇನೆ‘ ಎಂದು ಮಸ್ಕ್‌ ಹೇಳಿದ್ದಾರೆ.

ಆ ಮೂಲಕ ಟ್ವಿಟರ್‌ನಿಂದ ರದ್ದಾಗಿರುವ ಹಲವು ಖಾತೆಗಳು ಮರುಸ್ಥಾಪನೆಯಾಗುವ ಸುಳಿವನ್ನೂ ನೀಡಿದ್ದಾರೆ.

ಮಸ್ಕ್‌ ಅವರ ಟ್ವೀಟ್‌ಗೆ ಥರಹೇವಾರಿ ಕಮೆಂಟ್‌ಗಳು ಬಂದಿವೆ.

ಕೆಲ ದಿನಗಳ ಹಿಂದಷ್ಟೆ ಮಸ್ಕ್‌ ಟ್ವಿಟರ್ ಅನ್ನು ಖರೀದಿ ಮಾಡಿದ್ದರು. ಆ ಬಳಿಕ ಹಲವು ಬದಲಾವಣೆಗಳನ್ನು ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು