ಪ್ಯಾರಿಸ್: ಮೆಟಾ ಪ್ಲಾಟ್‌ಫಾರ್ಮ್ಸ್ ಆರಂಭಿಸಿರುವ ಥ್ರೆಡ್ಸ್ ವೇದಿಕೆಯು ಬಿಡುಗಡೆಯಾದ ಐದು ದಿನಗಳೊಳಗೆ 10 ಕೋಟಿಗೂ ಹೆಚ್ಚು ಬಳಕೆದಾರರನ್ನು ಸಂಪಾದಿಸಿದೆ.
ಚಾಟ್‌ಜಿಪಿಟಿ ಹೊಂದಿದ್ದ ‘ಅತ್ಯಂತ ವೇಗವಾಗಿ ಗ್ರಾಹಕರನ್ನು ಸಂಪಾದಿಸಿದ ಆ್ಯಪ್’ ಎಂಬ ಹೆಗ್ಗಳಿಕೆಯನ್ನು ಈ ಮೂಲಕ ತನ್ನದಾಗಿಸಿಕೊಂಡಿದೆ.
ಚಾಟ್‌ಜಿಪಿಟಿ 10 ಕೋಟಿ ಬಳಕೆದಾರರನ್ನು ಪಡೆಯಲು ಎರಡು ತಿಂಗಳು ತೆಗೆದುಕೊಂಡಿತ್ತು. ಥ್ರೆಡ್ಸ್ ಆ್ಯಪ್ ಬುಧವಾರಷ್ಟೇ ಬಿಡುಗಡೆ ಆಗಿದೆ. ಟ್ವಿಟರ್‌ನ ಸಕ್ರಿಯ ಬಳಕೆದಾರರ ಸಂಖ್ಯೆಯು 20 ಕೋಟಿ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.