ಬುಧವಾರ, ಮಾರ್ಚ್ 29, 2023
23 °C
ವಾಟ್ಸ್‌ಆ್ಯಪ್ ನಿಯಮ ಪಾಲಿಸದ ಖಾತೆಗಳ ವಿರುದ್ಧ ಕ್ರಮ

WhatsApp: ನವೆಂಬರ್‌ನಲ್ಲಿ 37.16 ಲಕ್ಷ ವಾಟ್ಸ್‌ಆ್ಯಪ್ ಖಾತೆಗೆ ನಿರ್ಬಂಧ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್, ಕಳೆದ ನವೆಂಬರ್‌ನಲ್ಲಿ ಭಾರತದಲ್ಲಿ 37.16 ಲಕ್ಷ ಖಾತೆಗಳನ್ನು ನಿರ್ಬಂಧಿಸಿದೆ.

ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ, ನಿರ್ಬಂಧಿಸಲಾದ ಖಾತೆಗಳ ಸಂಖ್ಯೆಯಲ್ಲಿ ಶೇ 60ರಷ್ಟು ಹೆಚ್ಚಳವಾಗಿದೆ.

ಭಾರತದಲ್ಲಿ 9.9 ಲಕ್ಷ ಖಾತೆಗಳನ್ನು ಬಳಕೆದಾರರು ರಿಪೋರ್ಟ್ ಮಾಡುವ ಮೊದಲೇ, ವಾಟ್ಸ್‌ಆ್ಯಪ್ ನಿಷೇಧಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಪ್ರಕಾರ, ವಾಟ್ಸ್‌ಆ್ಯಪ್ ನಿಯಮಗಳು ಮತ್ತು ಸರ್ಕಾರದ ನಿರ್ಬಂಧಗಳನ್ನು ಉಲ್ಲಂಘಿಸುವ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಹೀಗೆ ಕ್ರಮ ಕೈಗೊಂಡಿರುವ ಕುರಿತು ಸಂಸ್ಥೆ ಪ್ರತಿ ತಿಂಗಳು ವರದಿ ನೀಡಬೇಕಿದೆ.

ಅಕ್ಟೋಬರ್‌ನಲ್ಲಿ ದೇಶದಲ್ಲಿ 23.24 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು