ಸೋಮವಾರ, ಜೂನ್ 21, 2021
21 °C

ಲಸಿಕೆ ಪಡೆಯಲು ನೆರವಿಗೆವಾಟ್ಸ್ಆ್ಯಪ್‌ ಚಾಟ್‌ಬಾಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಿರಿಯ ನಾಗರಿಕರಿಗೆ ತಮ್ಮ ಲಸಿಕೆ ಪಡೆಯುವ ಕುರಿತ ಮಾಹಿತಿ ತಲುಪಿಸಲು ಸೇವಾ ಸಂಸ್ಥೆಯಾದ ರಾಬಿನ್‌ಹುಡ್ ಆರ್ಮಿ ಈಗ ವಾಟ್ಸ್‌ಆ್ಯಪ್‌ ಚಾಟ್‌ಬಾಟ್‌ ಸಂದೇಶ ಸೇವೆಯನ್ನು ಆರಂಭಿಸಿದೆ.

ಯೆಲ್ಲೊ ಮೆಸೆಂಜರ್‌ ಸಹಯೋಗದಲ್ಲಿ ಚಾಟ್‌ಬಾಟ್‌ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಸೇವಾ ಸಂಸ್ಥೆಯ ಸದಸ್ಯರು ಹಿರಿಯ ನಾಗರಿಕರಿಗೆ ಲಸಿಕೆ ಪಡೆಯಲು ನೆರವು ಒದಗಿಸಲಿದ್ದಾರೆ.

ಸಂಸ್ಥೆ ಸದಸ್ಯರ ನೆರವು ಪಡೆಯಲು ಅಥವಾ ಆಹಾರ, ಇನ್ನಿತರ ಅಗತ್ಯ ವಸ್ತುಗಳನ್ನು ನೆರವು ನೀಡಲು ಈ ಚಾಟ್‌ಬಾಟ್‌ ಸೇವೆ ಬಳಸಬಹುದು. ಕೋ–ವಿನ್‌ ಆ್ಯಪ್‌ನಲ್ಲಿ ಹೆಸರು ನೋಂದಣಿಗೂ ನೆರವು ನೀಡಲಾಗುತ್ತದೆ.

ಆಸಕ್ತರು ಸೇವೆ ಪಡೆಯಲು +91 8971966164 ಸಂಖ್ಯೆಗೆ ‘Hi’ ಸಂದೇಶ ಕಳುಹಿಸಬಹುದು. ಈ ಸೇವೆಯು ಪ್ರಸ್ತುತ 21 ರಾಜ್ಯಗಳ 186 ನಗರಗಳಲ್ಲಿ ಲಭ್ಯವಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು