ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಟೇಟಸ್‌ ರಿಪೋರ್ಟ್’ ಫೀಚರ್ ಪರಿಚಯಿಸುತ್ತಿದೆ ವಾಟ್ಸ್‌ಆ್ಯಪ್

Last Updated 2 ಮಾರ್ಚ್ 2023, 10:55 IST
ಅಕ್ಷರ ಗಾತ್ರ

ಸ್ಯಾನ್ ಫ್ರಾನ್ಸಿಸ್ಕೊ: ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯ‍ಪ್, ಸ್ಟೇಟಸ್‌ ರಿಪೋರ್ಟ್ ಮಾಡಬಹುದಾದ
ಹೊಸ ಫೀಚರ್‌ ಅನ್ನು ಪರಿಚಯಿಸುತ್ತಿದೆ.

ಆ್ಯಂಡ್ರಾಯ್ಡ್‌ನಲ್ಲಿ ಈ ಹೊಸ ಫೀಚರ್ ‘ರಿಪೋರ್ಟ್’ ಆಯ್ಕೆಯನ್ನು ವಾಟ್ಸ್‌ಆ್ಯಪ್ ಪರೀಕ್ಷೆ ನಡೆಸುತ್ತಿದೆ.

ಯಾವುದೇ ವಾಟ್ಸ್‌ಆ್ಯಪ್ ಸ್ಟೇಟಸ್, ಸೇವೆಯ ನಿಯಮಗಳ ಉಲ್ಲಂಘನೆ ಮಾಡುವಂತಿದ್ದರೆ ಈ ಹೊಸ ಫೀಚರ್ ಬಳಸಿ ರಿಪೋರ್ಟ್ ಮಾಡಬಹುದು. ಬಳಿಕ, ಆ ಸಂದೇಶ ಸ್ಟೇಟಸ್ ಮಾಡರೇಶನ್ ತಂಡಕ್ಕೆ ರವಾನೆಯಾಗುತ್ತದೆ.

ಜೊತೆಗೆ, ಈ ಫೀಚರ್ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಮೆಸೇಜ್, ಫೋಟೊ, ಲೊಕೇಶನ್, ಕರೆಗಳು ಮತ್ತು ಸ್ಟೇಟಸ್‌ ಅಪ್ಡೇಟ್‌ಗಳಿಗೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಮೂಲಕ ಭದ್ರತೆಯನ್ನು ಖಚಿತಪಡಿಸುತ್ತದೆ.

ಅಂದರೆ, ವಾಟ್ಸ್‌ಆ್ಯ‍ಪ್ ಸಂಸ್ಥೆ, ಮೆಟಾ ಮತ್ತು ಪ್ರಾಕ್ಸಿ ಪ್ರೊವೈಡರ್ ಸೇರಿದಂತೆ ಯಾರೊಬ್ಬರೂ ಸಹ ವೈಯಕ್ತಿಕ ಸಂದೇಶಗಳನ್ನು ಓದಲು ಮತ್ತು ಅವರ ಖಾಸಗಿ ಕರೆಗಳನ್ನು ಕೇಳಲು ಸಾಧ್ಯವಿಲ್ಲ.

ಈ ಹೊಸ ಫೀಚರ್ ವಾಟ್ಸ್‌ಆ್ಯಪ್ ಬಳಕೆಯನ್ನು ಅತ್ಯಂತ ಸುರಕ್ಷಿತಗೊಳಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT