ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

WhatsApp: ಹೊಸ ಅಪ್‌ಡೇಟ್‌ನಲ್ಲಿ ಅವತಾರ್ ಫೀಚರ್

ವಾಟ್ಸ್ಆ್ಯಪ್ ನೂತನ ಅಪ್‌ಡೇಟ್‌ನಲ್ಲಿ ಅವತಾರ್ ಆಯ್ಕೆ
Last Updated 7 ಡಿಸೆಂಬರ್ 2022, 10:56 IST
ಅಕ್ಷರ ಗಾತ್ರ

ಬೆಂಗಳೂರು: ವಾಟ್ಸ್ಆ್ಯಪ್ ನೂತನ ಅಪ್‌ಡೇಟ್‌ನಲ್ಲಿ ಅವತಾರ್ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಲಾಗುತ್ತಿದೆ.

ಈಗಾಗಲೇ ಎಮೋಜಿ, ಸ್ಟಿಕರ್ಸ್ ಮತ್ತು ಜಿಫ್ ಬಳಸುತ್ತಿರುವವರಿಗೆ, ಅವತಾರ್ ಹೊಸದಾಗಿ ಲಭ್ಯವಾಗುತ್ತಿದೆ.

ಮೆಟಾ ಒಡೆತನದ ವಾಟ್ಸ್‌ಆ್ಯಪ್, ಅವತಾರ್ ಫೀಚರ್ ಅನ್ನು ಪರೀಕ್ಷಾರ್ಥ ಬಳಕೆ ಮಾಡಿತ್ತು. ಬಳಿಕ, ಈಗ ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಹೊಸ ಅಪ್‌ಡೇಟ್ ಜತೆಗೆ ನೀಡುತ್ತಿದೆ.

ವಾಟ್ಸ್‌ಆ್ಯಪ್ ಬಳಕೆದಾರರು, ಹೊಸ ಅವತಾರ್ ಫೀಚರ್ ಬಳಸಿಕೊಂಡು, 36 ಬಗೆಯ ವಿವಿಧ ಅವತಾರ್ ರಚಿಸಬಹುದು. ಅದನ್ನು ಸ್ಟಿಕರ್ಸ್, ಡಿಸ್‌ಪ್ಲೇ ಆಗಿಯೂ ಬಳಸಬಹುದು.

ವಿವಿಧ ಕೇಶವಿನ್ಯಾಸ, ಮುಖ ಚಹರೆ, ವಸ್ತ್ರಗಳನ್ನು ಧರಿಸಿಕೊಂಡಿರುವ ಅವತಾರ್ ರಚಿಸಲು ವಾಟ್ಸ್‌ಆ್ಯಪ್ ಬಳಕೆದಾರರಿಗೆ ಅವಕಾಶ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT