ಹಳೆಯ ಐಫೋನ್‌ಗಳಲ್ಲಿ ಸ್ಥಗಿತವಾಗಲಿದೆ ವಾಟ್ಸ್‌ಆ್ಯಪ್ ಕಾರ್ಯಾಚರಣೆ

ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್, ಐಓಎಸ್ 10 ಮತ್ತು ಐಓಎಸ್ 11 ಬಳಸುತ್ತಿರುವ ಹಳೆಯ ಐಫೋನ್‌ಗಳಲ್ಲಿ ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದೆ.
ಈ ವರ್ಷದ ಅಕ್ಟೋಬರ್ 24ರ ಬಳಿಕ, ಹಳೆಯ ಐಓಎಸ್ 10 ಮತ್ತು ಐಓಎಸ್ 11 ಬಳಸುತ್ತಿರುವ ಐಫೋನ್‌ಗಳಿಗೆ ವಾಟ್ಸ್‌ಆ್ಯಪ್ ಬೆಂಬಲ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಮೆಟಾ ಕಂಪನಿ ಹೇಳಿದೆ.
ಹೀಗಾಗಿ, ವಾಟ್ಸ್‌ಆ್ಯಪ್ ಬಳಸಬೇಕಾದರೆ, ಐಫೋನ್‌ಗಳಲ್ಲಿ ಐಓಎಸ್ 12 ಮತ್ತು ಅದರ ನಂತರದ ಐಓಎಸ್ ಆವೃತ್ತಿ ಇರಬೇಕಾಗಿದೆ.
WhatsApp: ಬ್ಯುಸಿನೆಸ್ ಬಳಕೆದಾರರಿಗೆ ಪ್ರೀಮಿಯಂ ಚಂದಾದಾರಿಕೆ ಪ್ಲ್ಯಾನ್
ಹೊಸ ಆಯ್ಕೆಗಳನ್ನು ವಾಟ್ಸ್‌ಆ್ಯಪ್ ಅಪ್‌ಡೇಟ್‌ಗಳ ಮೂಲಕ ಬಳಕೆದಾರರಿಗೆ ನೀಡುತ್ತಿದೆ. ಆದರೆ ಹಳೆಯ ಆ್ಯಂಡ್ರಾಯ್ಡ್ ಮತ್ತು ಐಓಎಸ್ ಆವೃತ್ತಿ ಬಳಕೆದಾರರಿಗೆ ನೂತನ ಫೀಚರ್‌ಗಳು ಲಭ್ಯವಾಗುವುದಿಲ್ಲ.
ಮಾರ್ಚ್ನಲ್ಲಿ ಭಾರತದ 18 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳ ನಿಷೇಧ: ಕಾರಣವೇನು?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.