ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್ಆ್ಯಪ್ ಸ್ಟೇಟಸ್ ವಿಡಿಯೊ ಅವಧಿ ಹೆಚ್ಚಳ

Last Updated 22 ಮೇ 2020, 6:28 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಬಾಧೆಯಿಂದಾಗಿ ಲಾಕ್‌ಡೌನ್ ಬಳಿಕ ಇಂಟರ್‌ನೆಟ್‌ ಬಳಕೆಯೂ ಹೆಚ್ಚಾಗತೊಡಗಿತ್ತು. ಮನೆಯಲ್ಲಿಯೇ ಇರುವುದರಿಂದ ವಾಟ್ಸ್ಆ್ಯಪ್‌ನ ಸ್ಟೇಟಸ್‌ಗಳಲ್ಲಿ ವಿಡಿಯೊ ಅಳವಡಿಸುವುದನ್ನೂ ಜನ ಹೆಚ್ಚು ಮಾಡಿದ್ದರು. ಇದು ಸರ್ವರ್‌ಗೆ ಒತ್ತಡ ಉಂಟು ಮಾಡಬಲ್ಲುದು ಎಂಬ ಕಾರಣಕ್ಕೆ ವಾಟ್ಸ್ಆ್ಯಪ್ಈ ಸ್ಟೇಟಸ್ ವಿಡಿಯೊಗಳ ಅವಧಿಯನ್ನು 15 ಸೆಕೆಂಡಿಗೆ ಇಳಿಸಿತ್ತು. ಎರಡು ತಿಂಗಳ ಬಳಿಕ ಮತ್ತೆ 30 ಸೆಕೆಂಡ್‌ಗಳ ಅವಧಿಯ ವಿಡಿಯೊಗೆ ಅವಕಾಶ ಮಾಡಿಕೊಡಲಾಗಿದೆ.

2017ರಲ್ಲಿ ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಸ್ಟೇಟಸ್ ರೂಪದಲ್ಲಿ ವಿಡಿಯೊ, ಜಿಫ್ ಅಥವಾ ಫೋಟೊಗಳನ್ನು ಅಳವಡಿಸಿಕೊಳ್ಳುವ ವೈಶಿಷ್ಟ್ಯವನ್ನು ಪರಿಚಯಿಸಲಾಗಿತ್ತು. ಇದು 24 ಗಂಟೆಗಳ ಕಾಲ ಚಾಲ್ತಿಯಲ್ಲಿದ್ದು, ಬಳಿಕ ತಾನಾಗಿ ಅಳಿಸಿಹೋಗುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ವಿಡಿಯೊದ ಅವಧಿಯನ್ನು 15 ಸೆಕೆಂಡ್‌ಗಳಿಗೆ ಇಳಿಸಿದ ಬಳಿಕ ಈಗ ವಾಟ್ಸ್ಆ್ಯಪ್‌ನ ಪರಿಷ್ಕೃತ ಆವೃತ್ತಿಯಲ್ಲಿ ಅದೇ ವೈಶಿಷ್ಟ್ಯವನ್ನು ಯಥಾಸ್ಥಿತಿಗೆ ಮರಳಿಸಲಾಗಿದೆ. ಆಂಡ್ರಾಯ್ಡ್‌ನಲ್ಲಿ ವಾಟ್ಸ್ಆ್ಯಪ್ 2.20.166 ಆವೃತ್ತಿಯಲ್ಲಿ ಈ ವ್ಯವಸ್ಥೆ ಲಭ್ಯವಿದೆ. ಬಳಕೆದಾರರು ಈಗಾಗಲೇ ಈ ಪರಿಷ್ಕೃತ ಆವೃತ್ತಿಯನ್ನು ಪಡೆದುಕೊಳ್ಳಲಾರಂಭಿಸಿದ್ದಾರೆ. ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಅಪ್‌ಡೇಟ್’ ರೂಪದಲ್ಲಿ ಲಭ್ಯವಾಗುತ್ತಿದೆ.

ಸರ್ವರ್‌ನಲ್ಲಿನ ದಟ್ಟಣೆ ನಿಯಂತ್ರಿಸುವುದಕ್ಕಾಗಿ ವಿಡಿಯೊದ ಗಾತ್ರ ಮತ್ತು ಅವಧಿಯನ್ನು ಕಿರಿದುಗೊಳಿಸಲಾಗಿತ್ತು. ಸದ್ಯ ಭಾರತದಲ್ಲಿ ಮಾತ್ರ ಈ ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ನಿಧಾನವಾಗಿ ಜಗತ್ತಿನ ಇತರೆಡೆಯೂ ಲಭ್ಯವಾಗಲಿದೆ. ವಾಟ್ಸ್ಆ್ಯಪ್ ಪರಿಷ್ಕೃತ ಆವೃತ್ತಿ ಲಭ್ಯವಿದೆಯೇ ಎನ್ನುವುದನ್ನು ಪ್ಲೇ ಸ್ಟೋರ್‌ನಲ್ಲಿ ಹೋಗಿ ಪರಿಶೀಲಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT