ನವದೆಹಲಿ: ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಆ್ಯಪಲ್ ಐಪೋನ್ಗೆ ಬದಲಾಗುವಾಗ ಎದುರಾಗುವ ವಾಟ್ಸ್ಆ್ಯಪ್ ಚಾಟ್ ವರ್ಗಾವಣೆ ಸಮಸ್ಯೆಗೆ ಮುಕ್ತಿ ಹಾಡಲು ಮೆಟಾ ಒಡೆತನದ ವಾಟ್ಸ್ಆ್ಯಪ್ ಮುಂದಾಗಿದೆ.

ವಾಬೀಟಾಇನ್ಫೋ ವರದಿ ಪ್ರಕಾರ, ವಾಟ್ಸ್ಆ್ಯಪ್, ಆ್ಯಂಡ್ರಾಯ್ಡ್ ಚಾಟ್ ಅನ್ನು ಐಫೋನ್ನಲ್ಲಿ ಬಳಸಲು ಅನುಕೂಲವಾಗುವಂತೆ, ಇಂಪೋರ್ಟ್ ಚಾಟ್ ಹಿಸ್ಟರಿ ಎನ್ನುವ ಆಯ್ಕೆಯನ್ನು ಪರಿಶೀಲಿಸುತ್ತಿದೆ.

ಐಓಎಸ್ ವಾಟ್ಸ್ಆ್ಯಪ್ ಬೀಟಾ ಆವೃತ್ತಿಯಲ್ಲಿ ನೂತನ ಆಯ್ಕೆಯನ್ನು ಕಂಪನಿ ಪರಿಶೀಲಿಸುತ್ತಿದೆ.

ಐಫೋನ್ನಿಂದ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗೆ ವಾಟ್ಸ್ಆ್ಯಪ್ ಚಾಟ್ ಅನ್ನು ವರ್ಗಾಯಿಸುವ ಅವಕಾಶವನ್ನು ಆ್ಯಪ್ನಲ್ಲೇ ಒದಗಿಸಲಾಗಿದೆ.

ಹೊಸ ಸರ್ಚ್ ಫೀಚರ್ ಪರಿಚಯಿಸಲಿದೆ ವಾಟ್ಸ್ಆ್ಯಪ್

ಅದೇ ಮಾದರಿಯಲ್ಲಿ, ಆ್ಯಂಡ್ರಾಯ್ಡ್ ಚಾಟ್ ಅನ್ನು ಕೂಡ ಐಪೋನ್ಗೆ ವರ್ಗಾಯಿಸಲು ಯಾವುದೇ ಥರ್ಡ್ ಪಾರ್ಟಿ ಆ್ಯಪ್ ನೆರವಿಲ್ಲದೆಯೇ, ನೇರವಾಗಿ ವಾಟ್ಸ್ಆ್ಯಪ್ ಮೂಲಕವೇ ಮಾಡಿಕೊಳ್ಳುವಂತಾಗಲು ಹೊಸ ಆಯ್ಕೆ ಸಹಕಾರಿಯಾಗಲಿದೆ.

ವಿಡಿಯೊ, ಪೋಟೊ ಎಡಿಟ್ ಮಾಡಲು ಹೊಸ ಆಯ್ಕೆ ಪರಿಚಯಿಸಲಿದೆ ವಾಟ್ಸ್ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.